ಪ್ರಕಟಣೆ

ಕುಶಾಲನಗರ ಪರ್ಪಲ್ ಪಾಮ್ಸ್ ನಲ್ಲಿ ವಿವಿಧ ಹುದ್ದೆಗೆ ಅ.13 ರಂದು ನೇರ ಸಂದರ್ಶನ

ಮಡಿಕೇರಿ ಅ.09:-ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಪರ್ಪಲ್ ಪಾಮ್ಸ್ ರೆಸಾರ್ಟ್ ಮತ್ತು ಸ್ಪಾ, ಕುಶಾಲನಗರ-571234 ಇಲ್ಲಿ ಅಕ್ಟೋಬರ್, 13 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ “ನೇರ ಸಂದರ್ಶನ” ನಡೆಯಲಿದೆ.
ಈ ನೇರ ಸಂದರ್ಶನದಲ್ಲಿ ಪರ್ಪಲ್ ಪಾಮ್ಸ್ ರೆಸಾರ್ಟ್ ಮತ್ತು ಸ್ಪಾ, ಕುಶಾಲನಗರ, ಇವರು ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ನೇರ ಸಂದರ್ಶನದಲ್ಲಿ ಪ್ರಂಟ್ ಆಫೀಸ್ ಅಸೋಷಿಯೇಟ್, ಗೆಸ್ಟ್ ರೆಲೇಷನ್ ಅಸೋಷಿಯೇಟ್, ಮೈಂಟೆನ್ಸ್ ಡಿಪಾರ್ಟ್‍ಮೆಂಟ್, ಸೇಲ್ಸ್ ಎಕ್ಸಿಕ್ಯೂಟಿವ್ ಅಂಡ್ ಸೆಕ್ಯುರಿಟಿ ಗಾರ್ಡ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿ ಆಯ್ಕೆ ಮಾಡಲಾಗುವುದು.
ಈ ಹುದ್ದೆಗೆ ಎಸ್‍ಎಸ್‍ಎಲ್‍ಸಿ. ಪಿಯುಸಿ, ಪದವಿ ಮತ್ತು ಹೋಟೆಲ್ ಮ್ಯಾನೆಜ್‍ಮೆಂಟ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಿ ಉದ್ಯೋಗದ ನೆರವು ಪಡೆಯಬಹುದು. ಅಭ್ಯರ್ಥಿಗಳು ಹೋಟೆಲ್ ಕ್ಷೇತ್ರದಲ್ಲಿ ಅನುಭವ ಇರುವವರಿಗೆ ಆದ್ಯತೆ ಮತ್ತು ಉತ್ತಮ ಕೌಶಲ್ಯ ಇರಬೇಕು. ಹಾಗೂ ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣಪತ್ರ (ಅನ್ವಯಿಸುವವರಿಗೆ ಮಾತ್ರ) ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಸಿ.ಬಿ.ಮಂಜುನಾಥ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಜಾಬ್ ಕೋಆರ್ಡಿನೇಟರ್– 8296020826 ಇವರನ್ನು ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!