ಪ್ರಕಟಣೆ

ಸೆ.9: ಸೀಗೆಹೊಸೂರಿನಲ್ಲಿ ವಾಣಿಜ್ಯ ಮಳಿಗೆ, ಗೋದಾಮು ಕಟ್ಟಡ ಉದ್ಘಾಟನೆ

ಕೂಡಿಗೆ, ಸೆ. 8: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನೂತನವಾಗಿ ಸೀಗೆಹೊಸೂರು ಗ್ರಾಮದಲ್ಲಿ ನಿರ್ಮಾಣಗೊಂಡಿರುವ ವಾಣಿಜ್ಯ ಮಳಿಗೆ, ಮತ್ತು ಗೋದಾಮು ಕಟ್ಟಡ ಉದ್ಘಾಟನೆ ಸೆ 9 ರಂದು ನಡೆಯಲಿದೆ.
ನೂತನ ಕಟ್ಟಡದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಅಧ್ಯಕ್ಷರಾದ ಕೊಡಂದೇರ ಪಿ. ಗಣಪತಿ ನೆರವೇರಿಸಿದರು.
ಅಧ್ಯಕ್ಷತೆಯನ್ನು ಸಹಕಾರ ಸಂಘದ ಅಧ್ಯಕ್ಷರಾದ ಕೆ.ಕೆ. ಹೇಮಂತ್ ಕುಮಾರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಸ್. ಆರ್. ಸುನಿಲ್ ರಾವ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ನಿರ್ದೇಶಕರಾದ ಟಿ.ಆರ್. ಶರವಣ ಕುಮಾರ್, ಎಸ್. ಸಿ. ಶರತ್ ಶೇಖರ್, ಹೆಚ್. ಕೆ. ಮಾದಪ್ಪ, ಎನ್. ಎಂ. ಉತ್ತಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶೈಲಜಾ, ಕುಶಾಲನಗರ ತಾಲ್ಲೂಕು ಅಹಾರ ನಿರೀಕ್ಷಕರಾದ ಸ್ವಾತಿ ಸೇರಿದಂತೆ ಆಡಳಿತ ಮಂಡಳಿಯ ಉಪಾಧ್ಯಕ್ಷರು ನಿರ್ದೇಶಕರು ಭಾಗವಹಿಸಿದರು ಎಂದು ಸಂಘದ ಕಾರ್ಯದರ್ಶಿ ಹರ್ಷರವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!