ಕುಶಾಲನಗರ, ಜು 20: ದಿನಾಂಕ: 19-07-2026 ರ ಭಾನುವಾರ ಕುಶಾಲನಗರ ತಾಲ್ಲೂಕು ನೃತ್ಯ ಶಿಕ್ಷಕರ ಮತ್ತು ನೃತ್ಯಗಾರರ ಸಭೆಯನ್ನು ಕುಶಾಲನಗರದ ಶ್ರೀ ದುರ್ಗಾ ವೀರಭೂಮಿ ರೆಸಾರ್ಟ್ ಸಭಾಂಗಣದಲ್ಲಿ ತಾಲ್ಲೂಕು ನೃತ್ಯ ಶಿಕ್ಷಕರ ವತಿಯಿಂದ ಆಯೋಜಿಸಲಾಗಿತ್ತು. ಸಭೆಯಲ್ಲಿ ನೃತ್ಯ ಶಾಲೆಗಳ ಸಾಮಾಜಿಕ ಬೆಳವಣಿಗೆಗಳು ಮತ್ತು ಸಂಸ್ಕೃತಿಯನ್ನು ಬೆಳೆಸುವ ಸಲುವಾಗಿ ತಾಲ್ಲೂಕಿನ ಎಲ್ಲಾ ನೃತ್ಯ ಶಾಲಾ ಶಿಕ್ಷಕರುಗಳು ಸೇರಿ ಸಂಘವನ್ನು ನಿರ್ಮಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಕುಶಾಲನಗರ ತಾಲ್ಲೂಕಿನ ಒಟ್ಟು 12 ನೃತ್ಯ ಮಾಲೀಕರು ಹಾಗೂ ತರಬೇತುದಾರರು ಹಾಜರಿದ್ದರು.
ತಾಲ್ಲೂಕು ಶಿಕ್ಷಕರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆಗಾಗಿ ನೃತ್ಯ ತರಬೇತುದಾರರ ಚುನಾವಣೆ ನಡೆಯಿತು. ಎಲ್ಲಾ ನೃತ್ಯ ಶಿಕ್ಷಕರ ಬೆಂಬಲ ಮತ್ತು ಒಗ್ಗಟ್ಟಿನಿಂದ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಟೈಮ್ ಬ್ರೇಕರ್ಸ್ ಡ್ಯಾನ್ಸ್ ಸ್ಟುಡಿಯೋ ನೃತ್ಯ ಸಂಯೋಜಕ ಶ್ರೀ ಪ್ರದೀಪ್, ಉಪಾಧ್ಯಕರಾಗಿ ಟೀಮ್ ಡ್ರೀಮ್ ಸ್ಟಾರ್ ನೃತ್ಯ ಸಂಯೋಜಕ ಶ್ರೀ ಶರಣ್, ಕಾರ್ಯದರ್ಶಿಯಾಗಿ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ನೃತ್ಯ ಸಂಯೋಜಕ ಶ್ರೀ ಅಕ್ತರ್, ಸಂಚಾಲಕರಾಗಿ ತಾಂಡವಂ ಡ್ಯಾನ್ಸ್ ಸ್ಟುಡಿಯೋ ಶ್ರೀ ಚಂದನ್, ಖಾಚಾಂಚಿಯಾಗಿ ಕುಂದನ ನೃತ್ಯಾಲಯ ಶ್ರೀಮತಿ ವಿನುತಾ, ಸಂಘದ ಮುಖ್ಯ ಸದಸ್ಯರಾಗಿ ಡಿ.ಸಿ ಡ್ಯಾನ್ಸ್ ಸ್ಟುಡಿಯೋ ಶ್ರೀ ನಿಸಾರ್ ಮತ್ತು ಸಂಘದ ಇತರೆ ಸದಸ್ಯರುಗಳಾಗಿ ನಟರಾಜ ಸಂಗೀತ ಕಲಾಕೇಂದ್ರದ ಸ್ಥಾಪಕರಾದ ಶ್ರೀ ವಿದ್ವಾನ್ ಶಂಕರಯ್ಯರವರು, ನಾದಾಂತ ನಾಟ್ಯ ಮಯೂರಿ ನೃತ್ಯ ಸಂಯೋಜಕಿ ಶ್ರೀಮತಿ ಮಂಜು ಭಾರ್ಗವಿ, ಯುೂನಿಕ್ ಶಾರದಾ ಕಲಾಕೇಂದ್ರದ ನೃತ್ಯ ಸಂಯೋಜಕರು, ನಾಟ್ಯಾನಿಕೇತನ ನೃತ್ಯ ಸಂಯೋಜಕರು, ಏಂಜಲ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ನೃತ್ಯ ಸಂಯೋಜಕರು ಮತ್ತು ನರ್ತನಾಲಯ ನೃತ್ಯ ಸಂಯೋಜಕರುಗಳು ತಾಲ್ಲೂಕು ಸಂಘಕ್ಕೆ ಆಯ್ಕೆಯಾಗಿ ಸಂಘದ ಎಲ್ಲಾ ನೃತ್ಯ ಶಿಕ್ಷಕರಗಳ ವತಿಯಿಂದ ಸಿಹಿ ಹಂಚುವ ಮೂಲಕ ಅಭಿನಂದಿಸಲಾಯಿತು. ಮುಂದಿನ ದಿನಗಳಲ್ಲಿ ಕುಶಾಲನಗರ ತಾಲ್ಲೂಕು ನೃತ್ಯ ಶಿಕ್ಷಕರ ಸಂಘದ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ಏರ್ಪಡಿಸುವ ಬಗ್ಗೆ ಸಂಘದಲ್ಲಿ ಚರ್ಚಿಸಲಾಯಿತು ಮತ್ತು ನೃತ್ಯ ಶಾಲಾ ವಿದ್ಯಾರ್ಥಿಗಳ ಹಲವು ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
Back to top button
error: Content is protected !!