ಆರೋಪ

ಪೂರ್ಣಗೊಳ್ಳದ ಹಾರಂಗಿ ಮುಖ್ಯ ನಾಲೆಯ ಕಾಮಗಾರಿ, ರೈತರಿಗೆ ಅನಾನುಕೂಲ: ರೈತ ಸಂಘ ಆಕ್ರೋಶ

ಕುಶಾಲನಗರ, ಜು 18: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆಯ ಆಧುನೀಕರಣದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತೀವ್ರ ಅನಾನುಕೂಲ ಉಂಟಾಗಿದೆ ಎಂದು ಕೊಡಗು ಜಿಲ್ಲಾ ರೈತ ಸಂಘ ಮತ್ತು‌ ಹಸಿರು ಸೇನೆಯ ಅಧ್ಯಕ್ಷರೂ ಆದ ಕುಶಾಲನಗರ ಎಪಿಸಿಎಂಎಸ್ ನಿರ್ದೇಶಕ, ಹೆಬ್ಬಾಲೆ ಸಹಕಾರ ಸಂಘದ ನಿರ್ದೇಶಕ ಶರತ್ ಕುಮಾರ್ ಹೆಚ್.ಜೆ. (ಎಂ.ಎ.ಬಿ.ಎಡ್) ಆರೋಪಿಸಿದ್ದಾರೆ.

ಕ್ರಿಯಾ ಯೋಜನೆ ಅನುಗುಣವಾಗಿ ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆ 7 ರಿಂದ 14ನೇ ತೂಬಿನವರೆಗೆ ಮುಖ್ಯ ನಾಲೆಯ ಎರಡೂ ಕಡೆಗಳಲ್ಲಿ ಕಾಂಕ್ರೀಟಿರಣ , ಸೇತುವೆಯ ನಿರ್ಮಾಣದ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿರುವ ಕಾರಣ, ಅಚ್ಚುಕಟ್ಟು ಪ್ರದೇಶದ ರೈತರಿಗೆ ಬಿತ್ತನೆ ಬೀಜದ ಮೂಲಕ ಸಸಿ ಮಡಿಗಳ ಸಿದ್ದತೆ ಮಾಡಿಕೊಳ್ಳಲು ನೀರಿನ ಅಭಾವ ಕಾಡುತ್ತಿದೆ. ತಮ್ಮ ಜಮೀನಿನಲ್ಲಿ ಭತ್ತದ ಬಿತ್ತನೆ ಕಾರ್ಯ, ನಾಟಿ ಕಾರ್ಯ ಆರಂಭಿಸಲು ಮುಂದಾದರೂ ನೀರಿನ ಸಮಸ್ಯೆ ತಲೆದೋರಿದೆ.
ಸೇತುವೆ ಕಾಮಗಾರಿಗಳಿಂದ ಕೂಡ ಸಂಚಾರ ಅವ್ಯವಸ್ಥೆ ಎದುರಾಗಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ಕೆರೆಕಟ್ಟೆಗಳು,‌ಜಲಮೂಲಗಳು ಬತ್ತುತ್ತಿದ್ದು ಜನಜಾನುವಾರುಗಳಿಗೆ ಕುಡಿವ ನೀರಿನ‌ ಅಭಾವ ಎದುರಾಗಿದೆ. ಮಳೆಯಿರಲಿ, ಇಲ್ಲದಿರಲಿ ಹಾರಂಗಿ ಅಣೆಕಟ್ಟೆ ಅವಲಂಬಿಸಿದ ಚಟುವಟಿಕೆಗಳಿಗೆ ಅಬಾಧಿತವಾಗದಂತೆ ಶೀಘ್ರಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಶರತ್ ಕುಮಾರ್  ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!