ಸಭೆ

ಕುಶಾಲನಗರದಲ್ಲಿ ಮಹನೀಯರ ಪ್ರತಿಮೆಗಳ ನಿರ್ಮಾಣ, ರಸ್ತೆಗಳಿಗೆ ನಾಮಕರಣ ಹಿನ್ನಲೆಯಲ್ಲಿ ಸಾರ್ವಜನಿಕ ಸಭೆ

ಕುಶಾಲನಗರ, ಜೂ 16: ಕುಶಾಲನಗರ ಪುರಸಭೆಯ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರ ಪ್ರತಿಮೆ ನಿರ್ಮಾಣ ಸೇರಿದಂತೆ ರಸ್ತೆಗಳಿಗೆ ನಾಮಕರಣ ಮಾಡುವ ಸಂಬಂಧ
ಸಂಘಸಂಸ್ಥೆಗಳ ಪ್ರಮುಖರ ಅಭಿಪ್ರಾಯ ಸಂಗ್ರಹ ಸಭೆ ಕುಶಾಲನಗರ ಪುರಸಭೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕುಶಾಲನಗರದ ಹೆಮ್ಮೆಯ ಪುತ್ರ ಮಾಜಿ ಮುಖ್ಯಮಂತ್ರಿ ದಿ:ಆರ್.ಗುಂಡೂರಾವ್ ರವರ ಪ್ರತಿಮೆಯನ್ನು ಕುಶಾಲನಗರ ಪುರಸಭೆಯ ಆವರಣದಲ್ಲಿ ಸ್ಥಾಪಿಸುವುದು, ಭಾರತದ ಮಾಜಿ ಉಪಪ್ರಧಾನಿ ಹಸಿರು ಕ್ರಾಂತಿಯ ಹರಿಕಾರ ದಿ:ಬಾಬು ಜಗಜೀವನರಾಂ ರವರ ಹೆಸರನ್ನು ಟಾಟಾ ಪೆಟ್ರೋಲ್ ಬಂಕ್ ಎದುರು ಇರುವ ವೃತ್ತಕ್ಕೆ ನಾಮಕರಣ ಮಾಡುವುದು, ತ್ರಿಭಾಷಾ ಜ್ಞಾನಿ, ಕವಿ, ಕುಶಾಲನಗರದ ಬೈಚನಹಳ್ಳಿಯಲ್ಲಿ ನೆಲೆಸಿದ್ದ ನಿವೃತ್ತ ಪ್ರಾಂಶುಪಾಲ ದಿ.ವಿ.ಎಸ್.ರಾಮಕೃಷ್ಣ ರವರ ಹೆಸರನ್ನು ಕಲಾಭವನಕ್ಕೆ ಹೋಗುವ ರಸ್ತೆಗೆ ನಾಮಕರಣ ಮಾಡುವ ಕುರಿತು
ಪುರಸಭೆಯ ಮುಖ್ಯ ಅಧಿಕಾರಿ ಅಧ್ಯಕ್ಷತೆಯಲ್ಲಿ
ಪುರಸಭಾ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

ಕೆಲವು ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಂಡಂತೆ ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸುವ ಬಗ್ಗೆ ಇಂದಿನ ಸಭೆಯ ವಿಚಾರದಲ್ಲಿ ಪ್ರಸ್ತಾವನೆ ಇಲ್ಲದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಯಿತು.
ಈ ಬಗ್ಗೆ ಮುಖ್ಯ ಅಧಿಕಾರಿ ಗಿರೀಶ್ ಅವರನದನು ಕೆಲವು ಸಂಘ-ಸಂಸ್ಥೆಗಳ ಪ್ರಮುಖರು ತರಾಟೆಗೆ ತೆಗೆದುಕೊಂಡರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತಃಳಿ ಸ್ಥಾಪನೆ ಸಂಬಂಧ ಶಾಸಕರ ಸಮ್ಮುಖದಲ್ಲಿ ಪ್ರತ್ಯೇಕ ಸಭೆ ಹಮ್ಮಿಕೊಳ್ಳುವ ಉದ್ದೇಶ ಹೊಂದಿರುವುದಾಗಿ ಮುಖ್ಯಾಧಿಕಾರಿ ಸಭೆಗೆ ಮಾಹಿತಿ‌ ನೀಡಿದರು.
ಉದ್ದೇಶಪೂರ್ವಕವಾಗಿ ಅಂಬೇಡ್ಕರ್ ಅವರ ಪುತಃಳಿ‌ ಸ್ಥಾಪನೆ ವಿಚಾರ ಕೈಬಿಡಲಾಗುದೆ ಎಂದು ಪ್ರಮುಖರು ಆರೋಪಿಸಿದರು. ಇಂದಿನ‌ ಸಭೆಯ ವಿಚಾರಗಳ ಜೊತೆಯಲ್ಲಿ ಅಂಬೇಡ್ಕರ್ ಪುಃತಳಿ ಸ್ಥಾಪನೆ ವಿಚಾರ ಇತ್ಯರ್ಥವಾಗಬೇಕಿದೆ ಎಂದು ಮಾಜಿ ಅಧ್ಯಕ್ಷ ಜೈವರ್ಧನ್, ವಿಶ್ವಜ್ಞಾನಿ ಅಂಬೇಡ್ಕರ್ ಟ್ರಸ್ಟ್ ನ ಲೋಕೇಶ್, ಡಿಎಸ್ಎಸ್ ನ ಕೆ.ಬಿ.ರಾಜು, ಅಂಬೇಡ್ಕರ್ ಜನಪರ ವೇದಿಕೆಯ ಜಯಪ್ರಕಾಶ್ ಮತ್ತಿತರರು ಪಟ್ಟು ಹಿಡಿದರು.
ಈಗಾಗಲೆ ಬಾಬು ಜಗಜೀವನರಾಂ ಅವರ ವೃತ್ತ‌ ನಿರ್ಮಾಣಕ್ಕೆ ಶಾಸಕರು ಖುದ್ದು ಭೂಮಿಪೂಜೆ ನೆರವೇರಿಸಿದ್ದು ಹೊಸದಾಗಿ ಈ ವಿಚಾರ ಕೈಗೆತ್ತಿಕೊಂಡಿರುವ ಕ್ರಮದ ಬಗ್ಗೆ ಶಿವಶಂಕರ್, ಪ್ರಕಾಶ್, ನಂಜುಂಡಸ್ವಾಮಿ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಕುಶಾಲನಗರ ಐ.ಬಿ. ರಸ್ತೆಯ ಬಳಿ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಪುರಸಭೆಯ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಪ್ರತಿಮೆ ನಿರ್ಮಿಸುವುದು, ಮೈಸೂರು ರಸ್ತೆಯ ವ್ಯಾಪ್ತಿಯಲ್ಲಿ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ವೃತ್ತ ನಿರ್ಮಾಣ ಮತ್ತು ಕಲಾ ಭವನ ತೆರಳುವ ರಸ್ತೆಗೆ ತ್ರಿಭಾಷಾ ಕವಿ ನಿವೃತ್ತ ಪ್ರಾಂಶುಪಾಲ ವಿ.ಎಸ್. ರಾಮಕೃಷ್ಣ ಅವರ ಹೆಸರನ್ನು ನಾಮಕರಣ ಮಾಡುವ ವಿಷಯ ಬಗ್ಗೆ ಚರ್ಚೆ ನಡೆದು ಸಲಹೆ ಸೂಚನೆಗಳನ್ನು ಪಡೆಯಲಾಯಿತು.
ಈ ಸಂದರ್ಭ ಸಭೆಯಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್,
ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು ಸೇರಿದಂತೆ ಪುರಸಭೆ ಅಧಿಕಾರಿಗಳು, ಮಾಜಿ ಜನ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!