ಆರೋಪ
ಕೊಟ್ಟಿಯೂರ್ ಶಿವ ಕ್ಷೇತ್ರದ ವಿರುದ್ದ ಕನ್ನಡಿಗರ ಅಸಮಾಧಾನ


ಕುಶಾಲನಗರ, ಜೂ 07: ಕೇರಳದ ಕಣ್ಣೂರಿನ ಕೊಟ್ಟಿಯೂರ್ ಶಿವ ಕ್ಷೇತ್ರದ ಬಗ್ಗೆ ಕನ್ನಡಿಗರ ಆಕ್ರೋಶ ವ್ಯಾಪಕವಾಗಿದೆ. ಕರ್ನಾಟಕದಿಂದ ದೇವರ ದರ್ಶನಕ್ಕೆ ತೆರಳಿದ ಬಹುತೇಕ ಮಂದಿಗೆ ಉಂಟಾದ ಕಹಿ ಅನುಭನ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಹರಡುತ್ತಿದೆ. ಮಹಿಳಾ ಭಕ್ತರಿಗೆ ಇರಿಸುಮುರಿಸು ಉಂಟಾಗುವ ರೀತಿಯ ವರ್ತನೆ, ಪುರುಷರ ಮೇಲೆ ಕೈ ಮಾಡುವ ಗೂಂಡಾಗಿರಿ ವರ್ತನೆ ಬಗ್ಗೆ ನೊಂದ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಟ್ಟಿಯೂರಿಗೆ ಕರ್ನಾಟಕದಿಂದ ಯಾರೂ ಕೂಡ ತೆರಳದಂತೆ ಎಚ್ಚರಿಸುವ ಅಭಿಯಾನ ಆರಂಭಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ದಿ ಪಡೆದ ಕ್ಷೇತ್ರಕ್ಕೆ ಕರ್ನಾಟಕದಿಂದ ಭಕ್ತರು ಮುಗಿಬಿದ್ದು ತೆರಳುತ್ತಿರುವ ಕಾರಣ ಕ್ಷೇತ್ರದಲ್ಲಿ ಒತ್ತಡ ಅಧಿಕವಾಗಿದೆ. ವಾಹನ ಸಂಚಾರ ಅಸ್ತವ್ಯಸ್ತತೆ, ಪಾರ್ಕಿಂಗ್ ಕೊರತೆ ನಡುವೆ ಕ್ಷೇತ್ರದಲ್ಲಿ ಕನ್ನಡಿಗರನ್ನು ಕೀಳಾಗಿ ಕಾಣಲಾಗುತ್ತಿದೆ ಎಂಬ ಆರೋಪಗಳು ವ್ಯಕ್ತಗೊಳ್ಳುತ್ತಿವೆ.