ಕುಶಾಲನಗರ, ಜೂ 06: ಕುಶಾಲನಗರ ಹಾರಂಗಿಯಿಂದ ಅತ್ತೂರು ಮಾರ್ಗವಾಗಿ
ಗುಡ್ಡೆಹೊಸೂರು ಹೋಗುವ ಸುಮಾರು 6 km ರಸ್ತೆಯು ತೀರ ಹದಗೆಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೂಡುಮಂಗಳೂರು ಮಾಜಿ ಅಧ್ಯಕ್ಷ ಭಾಸ್ಕರ್ ನಾಯಕ್ ಅತ್ತೂರು ಮಾರ್ಗವಾಗಿ
ಗುಡ್ಡೆಹೊಸೂರು ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಸಂಚಾರ ಮಾಡಿದರೆ ರಸ್ತೆಯಲ್ಲಿ ಗುಂಡಿ ಇದೆಯೋ ಅಥವಾ ಗುಂಡಿಯಲ್ಲಿ ರಸ್ತೆ ಇದೆಯೋ ಎಂಬಂದಾಗಿದೆ ಇದರಿಂದಾಗಿ ವಾಹನ ಸವಾಲರಿಗೆ ತೀರ ತೊಂದರೆ ಉಂಟಾಗಿದೆ ಕೆಲವು ತಿಂಗಳುಗಳ ಹಿಂದೆ ರಾಮಕೃಷ್ಣ ಎಂಬುವವರ ಮನೆ ಮುಂಭಾಗದಲ್ಲಿ ಇದ್ದ ಗುಂಡಿಯನ್ನು ತಪ್ಪಿಸಲು ಹೋಗಿ ಬೈಕ್ ಸವಾರ ಜೀವ ಕಳೆದುಕೊಂಡ ಘಟನೆ ಸುದ್ದಿಯಾಗಿತ್ತು,ಆದರೂ ಕೂಡ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ಇರುವುದು ಖಂಡನಯ, ಈ ಮಾರ್ಗದಲ್ಲಿ ದಿನನಿತ್ಯ ಸಾವಿರಾರು ಪ್ರವಾಸಿ ವಾಹನಗಳು ಸಂಚರಿಸುತ್ತಿದ್ದು ದಿನದಿಂದ ದಿನಕ್ಕೆ ರಸ್ತೆಯು ತೀರ ಹದಗೆಡುತ್ತಿದ್ದು ರಸ್ತೆಯಲ್ಲಿರುವ ಹಲವು ಗುಂಡಿಗಳು ಮುಕ್ಕಾಲು ಅಡಿ ಆಳಕ್ಕೆ ತಲುಪಿದ್ದು ಕೆಲವು ಗುಂಡಿಗಳನ್ನು ಸ್ಥಳಿಯರು ನೋಡಲಾರದೆ ತಮ್ಮ ಮನೆಯಲ್ಲಿರುವ ಇಟ್ಟಿಗೆ ಚೂರಿಗಳನ್ನು ಅಕಿ ಮುಚ್ಚುವಂತ ಪರಿಸ್ಥಿತಿ ಎದುರಾಗಿದೆ, ಈ ಮಾರ್ಗದಲ್ಲಿ ದಿನನಿತ್ಯ ಸಂಚರಿಸುವ ಸ್ಥಳೀಯ ಗುಡ್ಡೆಹೊಸೂರು,ಬೊಳ್ಳೂರು, ಮೈನ್ ಕೋರೆ,ಅತ್ತೂರು, ಹಾರಂಗಿ ಗ್ರಾಮದ ನಿವಾಸಿಗಳಿಗೆ ತೀರ ತೊಂದರೆ ಉಂಟಾಗಿದ್ದು ಈಗಾಗಲೇ ಮಳೆ ಪ್ರಾರಂಭವಾಗಿದ್ದು ರಸ್ತೆ ದುರಸ್ತಿ ಪಡಿಸದಿದ್ದರೆ ರಸ್ತೆ ಅಪಘಾತದಿಂದ ಹಲವು ಸಾವು ನೋವುಗಳು ಉಂಟಾಗಬಹುದು ಹಾಗಾಗಿ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯ ಮಾಡಬೇಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಎಚ್ಚರಿಸಿದರು.
Back to top button
error: Content is protected !!