ಕುಶಾಲನಗರ, ಜೂ 03: ಕುಶಾಲನಗರದ ಗುಮ್ಮನಕೊಲ್ಲಿಯ ಜಸ್ಟ್ ಚಿಲ್ ಬಾರ್ ಪಕ್ಕದ ಬಡಾವಣೆಯಲ್ಲಿ ನಿವಾಸಿಯೊಬ್ಬರು ರಸ್ತೆಯನ್ನು ಅತಿಕ್ರಮಿಸಿ ಕಾಂಪೌಂಡ್ ನಿರ್ಮಿಸಿದ್ದಾರೆ ಎಂದು ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ.
ಈಗಾಗಲೆ ಬಡಾವಣೆಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಆದರೆ ವ್ಯಕ್ತಿಯೊಬ್ಬರು ರಸ್ತೆ ಸೇರಿದಂತೆ ಚರಂಡಿ ಜಾಗ ಅತಿಕ್ರಮಿಸಿ ಮನೆಯ ಕಾಂಪೌಂಡ್ ನಿರ್ಮಿಸಿರುವ ಕಾರಣ ಕಾಮಗಾರಿಗೆ ಅಡ್ಡಿ ಎದುರಾಗಿದೆ. ಕೂಡಲೆ ಸದರಿ ಒತ್ತುವರಿಯನ್ನು ಕೂಡಲೆ ತೆರವುಗೊಳಿಸಿಕೊಡುವಂತೆ ನಿವಾಸಿಗಳಾದ ಮಂಜು, ರಾಕಿ, ಕವಿತಾ,ಲೋಕೇಶ್, ಮಂಜುನಾಥ್, ವಸಂತ್ ಅವರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
Back to top button
error: Content is protected !!