ಸಾಂಸ್ಕೃತಿಕ

ಕ್ರಿಯೇಟಿವ್ ಮಕ್ಕಳ ಬೇಸಿಗೆ ಶಿಬಿರದ ಅದ್ದೂರಿ ಸಮಾರೋಪ ಸಮಾರಂಭ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ


ಕುಶಾಲನಗರ,ಜೂ೧: ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಶಾಲೆಯ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮವು ಕೂಡಿಗೆಯ ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ವಿ.ಪಿ.ಶಶಿಧರ್, ಮಕ್ಕಳು ಮೊಬೈಲ್ ಹಾಗೂ ಇನ್ನಿತರ ಚಟಗಳ ದೂರವಾಗಿ ತಮ್ಮಲ್ಲಿರುವ ಕಲೆಯನ್ನು ಹೊರತರುವತ್ತ ಗಮನಹರಿಸಬೇಕು ಎಂದರು.
ಪತ್ರಕರ್ತ ಟಿ.ಆರ್.ಪ್ರಭುದೇವ್ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಮಕ್ಕಳು ಮೊಬೈಲ್ ಗೆ ದಾಸರಾಗದೇ ಇಂತಹ ಬೇಸಿರ ಶಿಬಿರಗಳನ್ನು ಪಾಲ್ಗೊಂಡು, ರಾಜ್ಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಂತಾಗಬೇಕು. ಬೇಸಿಗೆ ಶಿಬಿರಗಳು ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗಳಿಗೆ ಸಹಕಾರಿ ಎಂದರು.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಬಿ.ಶಂಶುದ್ಧೀನ್ ಮಾತನಾಡಿ, ಶಾಲಾ ವಿದ್ಯಾರ್ಥಿಗಳು ನಿರಂತರ ಪಾಠ ಪ್ರವಚನದಿಂದ ನೀರಸವಾಗಿರುತ್ತಾರೆ. ಅಂತಹ ಮಕ್ಕಳ ಮಾನಸಿಕ ಒತ್ತಡವನ್ನು ದೂರವಾಗಿಸಲು ಹಾಗೂ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರು ಇಂತಹ ಶಿಬಿರಗಳು ಸಹಕಾರಿ ಎಂದರು.
ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಸ್ಥಾಪಕರು ಹಾಗೂ ಮುಖ್ಯ ನೃತ್ಯ ಸಂಯೋಜಕ ಅಕ್ತರ್ ಮಾತನಾಡಿ, ಬಹಳಷ್ಟು ಪರಿಶ್ರಮದಿಂದ ಈ ಮಟ್ಟಕ್ಕೆ ತಲುಪಿದ್ದು, ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.
ಬೇಸಿಗೆ ಶಿಬಿರದಲ್ಲಿ ನೃತ್ಯ, ಗಾಯನ, ಚಿತ್ರಕಲೆ, ಓಟ, ಈಜು ಹಾಗೂ ಇನ್ನಿತರ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿ ಶುಭಹಾರೈಸಿದರು.
ಈ ಸಂದರ್ಭ ಬೇಸಿಗೆ ಶಿಬಿರದ ವಿದ್ಯಾರ್ಥಿಗಳು, ಪೋಷಕರು ಹಾಗೂ ನೃತ್ಯ ಸಂಯೋಜಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!