ಕುಶಾಲನಗರ, ಮೇ 30: ರಾಜ್ಯದ ನೂತನ ಸಿಎಂ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಕೊಡಗಿನ ಯುವ ಶಾಸಕರುಗಳಾದ ಡಾ. ಮಂತರ್ ಗೌಡ ಮತ್ತು ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಹೆಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕೊಡಗು ಜಿಲ್ಲಾಧ್ಯಕ್ಷ ಡಾ. ಬಿ ಎ ದಿನೇಶ್ ಶೆಟ್ಟಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕಾ ಪ್ರಕಟಣೆ ಹೊರಡಿಸಿರುವ ಅವರು, ಪ್ರಥಮ ಪ್ರಯತ್ನದಲ್ಲೆ ಕೊಡಗಿನ ಬಿಜೆಪಿ ಭದ್ರಕೋಟೆ ಬೇಧಿಸಿದ ಇಬ್ಬರು ಶಾಸಕರು ಅಲ್ಪ ಅವಧಿಯಲ್ಲಿಯೇ ಕೊಡಗಿನ ಜನತೆಯ ಮನೆಮನ ಗೆದ್ದಿದ್ದಾರೆ.
ತಮ್ಮ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದು ಕಡುಬಡವರ ಕಷ್ಟಕ್ಕೆ, ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯ ವಿವಿಧ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ದೂರದೃಷ್ಟಿ ಹೊಂದಿರುವ ಹಾಗೂ ಜನಾನುರಾಗಿರುವ ಕೊಡಗಿನ ಶಾಸಕರಿಬ್ಬರಿಗೂ ಕೂಡ ಸಚಿವ ಸ್ಥಾನ ನೀಡಿದಲ್ಲಿ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಹೊಂದಲು ಅನುಕೂಲವಾಗುತ್ತದೆ ಎಂದು ಡಾ. ಬಿ.ಎ. ದಿನೇಶ್ ಶೆಟ್ಟಿ ಅಭಿಪ್ರಾಯಿಸಿದ್ದಾರೆ.
Back to top button
error: Content is protected !!