ಕಾರ್ಯಕ್ರಮ

ಕೊಡಗು ಕ್ಯಾಥೋಲಿಕ್ ಅಸೋಸಿಯೇಷನ್ ಮತ್ತು ಮೈಸೂರು ಡಯಾಸಿಸ್ ಬ್ಲಡ್ ಫೌಂಡೇಶನ್ ನ ಪದಗ್ರಹಣ ಸಮಾರಂಭ

ಕುಶಾಲನಗರ, ಮೇ 08:ಕೊಡಗು ಕ್ಯಾಥೋಲಿಕ್ ಅಸೋಸಿಯೇಷನ್ ಮತ್ತು ಮೈಸೂರು ಡಯಾಸಿಸ್ ಬ್ಲಡ್ ಫೌಂಡೇಶನ್ ನ ಪದಗ್ರಹಣ ಸಮಾರಂಭ ಮಡಿಕೇರಿಯ ಸಂತ ಮೈಕಲರ ಚರ್ಚ್ ಆವರಣದಲ್ಲಿ ನಡೆಯಿತು.

ಕ್ಯಾಥೋಲಿಕ್ ಅಸೋಸಿಯೇಷನ್ ಕೊಡಗು ಸಂಘಟನೆ ಮತ್ತು ಮೈಸೂರು ಡಯಾಸಿಸ್ ಬ್ಲಡ್ ಫೌಂಡೇಶನ್ ಎಂಬ ಸಮಾಜ ಸೇವಾ ಸಂಸ್ಥೆಯನ್ನು ಕೊಡಗಿನ ಶ್ರೇಷ್ಟ ಗುರುಗಳಾದ ವಂದನೀಯ ಫಾದರ್ ಜಾರ್ಜ್ ದೀಪಕ್ ರವರು ದೀಪ ಬೆಳಗುವುದರೊಂದಿಗೆ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು, ಸಂಘಟನೆಗೆ ಹಲವಾರು ಉತ್ತಮ ಸಲಹೆಗಳನ್ನು ನೀಡಿ ಸಂಘಟನೆ ಉತ್ತಮ ಉದ್ದೇಶ ಗಳಿಂದ ನಡೆಯಲು ಪ್ರಾರ್ಥನೆ ಮಾಡಿ ಆಶೀರ್ವಚನ ನೀಡಿದರು.

ಸಮಾರಂಭಕ್ಕೆ ಕೊಡಗಿನ ಎಲ್ಲಾ ಬಾಗದ ಕಥೋಲಿಕ್ ಸಮುದಾಯದ ನಾಯಕರು ಭಾಗವಹಿಸಿದ್ದರು.

ಸಂಘಟನೆಯ ಪ್ರಮುಖರಾದ ಕೆ.ಟಿ. ಬೇಬಿ ಮ್ಯಾಥ್ಯೂ ಮಾತನಾಡಿ, ಸಂಘಟನೆ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು.

ಸಂಘಟನೆಯ ಸ್ಥಾಪಕರಾದ ವಿನ್ಸೆಂಟ್ ಲೋಬೋ ರವರು ಮಾತನಾಡಿ, ಸಂಘಟನೆ ಗುರಿ ಏನೆಂಬುದು ವಿವರಿಸಿದರು. ಎಲ್ಲಾ ಸಮುದಾಯದೊಂದಿಗೆ ಸೌಹಾರ್ದವಾಗಿದ್ದು ಸಮಾಜದಲ್ಲಿ ಶಾಂತಿ ಪ್ರೀತಿ ನೆಮ್ಮದಿಯಿಂದ ಬಾಳಲು ಕರೆ ನೀಡಿದರು. ಮೈಸೂರು ಬ್ಲಡ್ ಫೌಂಡೇಶನ್ ನ ಕೆಲಸ ಕಾರ್ಯಗಳ ಬಗ್ಗೆ ವಿವರಣೆ ನೀಡಿ ಇದೊಂದು ಅತ್ಯಂತ ಅಮೂಲ್ಯವಾದ ರಕ್ತದಾನಿಗಳನ್ನು ಪ್ರೋತ್ಸಾಹಿಸುವುದರ ಮೂಲಕ ಇನ್ನಿತರ ಕೆಲಸ ಕಾರ್ಯಗಳನ್ನು ನಡೆಸಲು ಉದ್ದೇಶಿಸಿರುವುದಾಗಿ ಹೇಳಿದರು.

ಸಂಪೂರ್ಣ ಕಾರ್ಯಕ್ರಮವನ್ನು ಲೂಯಿಸ್ ಡಿಸಿಲ್ವಾ ರವರು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಕೆ.ಟಿ. ಬೇಬಿ ಮ್ಯಾಥ್ಯೂ, ಜಿಲ್ಲಾಧ್ಯಕ್ಷರಾಗಿ ವಿನ್ಸೆಂಟ್ ಲೋಬೋ, ಉಪಾಧ್ಯಕ್ಷರಾಗಿ ಆರ್. ಮೈಕಲ್, ಪ್ರಧಾನ ಕಾರ್ಯದರ್ಶಿಯಾಗಿ ಲಿತೇಶ್ ಲೂಯಿಸ್ ಮೊಂತೇರೋ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಲೂಯಿಸ್ ಡಿಸಿಲ್ವಾ, ಖಜಾಂಜಿಯಾಗಿ ಪ್ರೇಮ್ ದೀಪ್ ಪಿಂಟೋ, ನಿರ್ದೇಶಕರಾಗಿ ಶೋಭಾ ಲೋಬೋ, ಫೆಲಿಕ್ಸ್ ಮಿನೇಜಸ್, ಆರ್ ಜಾನ್, ಪಿ ಜೆ ಜಾರ್ಜ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಕೊಡಗಿನ ಕ್ಯಾಥೋಲಿಕ್ ಸಮುದಾಯದ ಎಲ್ಲರನ್ನೂ ಸದಸ್ಯರನ್ನಾಗಿ ಮಾಡಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಮತ್ತು ಕ್ರೈಸ್ತಪರ ಹೋರಾಟಗಳಲ್ಲಿ ತಮ್ಮ ಸಂಘಟನೆಯನ್ನು ತೊಡಗಿಸಿಕೊಳ್ಳುವ ನಿರ್ಣಯ ಕೈಗೊಳ್ಳಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!