ಅವ್ಯವಸ್ಥೆ
ಚರಂಡಿಯಲ್ಲಿ ಮಣ್ಣು, ಶಿಥಿಲಗೊಂಡು ಅಪಾಯ ಆಹ್ವಾನಿಸುತ್ತಿರುವ ಕಾಂಪೌಂಡ್ ಗಳು


ಕುಶಾಲನಗರ, ಮೇ 05: ಕುಶಾಲನಗರದ ಅಂಚೆ ಇಲಾಖೆ ಹಾಗೂ ಫಾತಿಮಾ ಪ್ರೌಢಶಾಲೆಯ ಕಾಂಪೌಂಡ್ ಗಳು ಶಿಥಿಲಗೊಂಡು ಅಪಾಯ ಆಹ್ವಾನಿಸುತ್ತಿದೆ. ಹೆದ್ದಾರಿಯಿಂದ ದಂಡಿನಪೇಟೆಗೆ ಸಂಪರ್ಕ ರಸ್ತೆ ಹದಗೆಟ್ಟಿದ್ದು ಚರಂಡಿಯಲ್ಲಿ ಮಣ್ಣಿನ ರಾಶಿ ತುಂಬಿಕೊಂಡಿದೆ. ಮಳೆ ಸಂದರ್ಭ ನೀರು ಸರಾಗವಾಗಿ ಹರಿಯದೆ ಒತ್ತಡ ಸೃಷ್ಠಿಯಾಗಿ ಶಿಥಿಲಗೊಂಡ ಕಾಂಪೌಂಡ್ ಗಳು ಹಾನಿ ಉಂಟುಮಾಡುವ ಮುನ್ನ ಸ್ಥಳೀಯ ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.