ಕಾರ್ಯಕ್ರಮ

ಕುಶಾಲನಗರ ರೋಟರಿ ಕ್ಲಬ್ ವತಿಯಿಂದ 76ನೇ ಗಣರಾಜ್ಯೋತ್ಸವ ಆಚರಣೆ

ಕುಶಾಲನಗರ, ಜ 26: ಕುಶಾಲನಗರ ರೋಟರಿ ಕ್ಲಬ್ ವತಿಯಿಂದ ರೋಟರಿ ಭವನದಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಮನು ಪೆಮ್ಮಯ್ಯ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ರೋಟರಿ ಸಂಸ್ಥೆ ರಾಷ್ಟ್ರದ ಸಂವಿಧಾನದ ಮೂಲ ತತ್ವಗಳಿಗೆ ಸದಾ ಬದ್ಧವಾಗಿದ್ದು, Service Above Self ಎಂಬ ಧ್ಯೇಯವಾಕ್ಯದಂತೆ ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು. ಈ ವರ್ಷ ರೋಟರಿ ಸಂಸ್ಥೆಗೆ 50ನೇ ವರ್ಷವಾದ ಸುವರ್ಣ ಮಹೋತ್ಸವವೂ ಗಣರಾಜ್ಯೋತ್ಸವದೊಂದಿಗೆ ಒಂದಾಗಿ ಆಚರಿಸಲಾಗುತ್ತಿದೆ ಎಂದರು.

ಸುವರ್ಣ ಮಹೋತ್ಸವದ ಅಂಗವಾಗಿ ಈ ವರ್ಷ “ಸ್ವಚ್ಛ ಕುಶಾಲನಗರ” ಎಂಬ ಥೀಮ್‌ನಡಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರ ಭಾಗವಾಗಿ ಕುಶಾಲನಗರ ಜನತೆಗೆ ಉಪಯುಕ್ತವಾಗುವ ಗಾರ್ಬೇಜ್ ಮ್ಯಾನೇಜ್‌ಮೆಂಟ್ ಪ್ಲಾಂಟ್ ನೀಡುವ ಯೋಜನೆ ರೂಪಿಸಲಾಗಿದ್ದು, ಮುಂದಿನ ತಿಂಗಳುಗಳಲ್ಲಿ ಅದನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಕಸ ವಿಂಗಡಣೆ, ಸ್ವಚ್ಛತೆ ಜಾಗೃತಿ ಹಾಗೂ ಮಹಿಳೆಯರು ಮತ್ತು ಮಕ್ಕಳಿಗೆ ಸಹಾಯವಾಗುವ ವಿವಿಧ ಸಾರ್ವಜನಿಕ ಸೇವಾ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸುವ ಉದ್ದೇಶವನ್ನು ರೋಟರಿ ಹೊಂದಿದ್ದು, ಗಣರಾಜ್ಯೋತ್ಸವದ ಆಶಯಗಳೊಂದಿಗೆ ರೋಟರಿ ಸುವರ್ಣ ಮಹೋತ್ಸವದ ಕಾರ್ಯಕ್ರಮಗಳು ಕೈಜೋಡಿಸಲಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಮಂಜುನಾಥ್ ಎಚ್.ಪಿ., ಹಿರಿಯ ರೋಟೇರಿಯನ್ಸ್‌ಗಳಾದ ಸತೀಶ್ ಎಸ್.ಕೆ., ರಂಗಸ್ವಾಮಿ, ಉಲ್ಲಾಸ್ ಕೃಷ್ಣ, ಕ್ರೆಸ್ವೆಲ್ ಕೋಟ್ಸ್ (Cresvell Coates), ಡಾ. ಹರಿ ಎ. ಶೆಟ್ಟಿ, ಪ್ರಕಾಶ್, ಹರೀಶ್ ಸಿ.ಬಿ., ಕಿರಣ್ ದೇವಯ್ಯ, ಶೋಭಾ ಸತೀಶ್, ನವೀನ್ ಪಿ.ಆರ್., ರಿಚರ್ಡ್ ಡಿ’ಸೌಜಾ, ರಾಜಶೇಖರ್ ಸೇರಿದಂತೆ ಅನೇಕ ರೋಟರಿ ಸದಸ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!