ರಾಜಕೀಯ

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದವನು ಯಾವ ಪಕ್ಷದ ಕಾರ್ಯಕರ್ತ

ಗೊಂದಲ‌ ಮೂಡಿಸಿದ ಸಾಮಾಜಿಕ ಜಾಲತಾಣದ ಚಿತ್ರಗಳು

ಕುಶಾಲನಗರ, ಆ 20: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಗುಡ್ಡೆಹೊಸೂರಿನಲ್ಲಿ‌ ಮೊಟ್ಟೆ ಎಸೆದವನು‌ ಕಾಂಗ್ರೆಸಿಗನೋ‌, ಬಿಜೆಪಿ ಕಾರ್ಯಕರ್ತನೋ ಎಂಬ ಚರ್ಚೆ ಬಿಸಿಯೇರಿದೆ. ಮೊಟ್ಟೆ ಎಸೆದವನು
ಸೋಮವಾರಪೇಟೆ ಸಂಪತ್ ಎಂಬಾತ ಎಂದು ತಿಳಿದುಬಂದಿದೆ. ಆದರೆ ಈತ ಕಾಂಗ್ರೆಸ್ ಬಾವುಟ ಹಿಡಿದು ಸೋನಿಯಾ ಗಾಂಧಿ ಭಾವಚಿತ್ರವುಳ್ಳ ಶಲ್ಯ ಧರಿಸಿ‌ ನಿಂತಿರುವ ಫೋಟೊ ಒಂದೆಡೆಯಾದರೆ‌ ಮತ್ತೊಂದೆಡೆ ಕೇಸರ ಶಲ್ಯ ಧರಿಸಿ ಶಾಸಕ ಅಪ್ಪಚ್ಚುರಂಜನ್ ಜೊತೆ ನಿಂತು ಫೋಟೊ ಗೆ ಪೋಸ್‌ ಕೊಟ್ಟಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಒಟ್ಟಿನಲ್ಲಿ ಈತ ಇದೀಗ ಯಾವ ಪಕ್ಷಕ್ಕೆ ಸೇರಿದವನು ಎಂಬ ಸ್ಪಷ್ಟನೆ ಆಯಾ ಪಕ್ಷದ ಮುಖಂಡರೇ ಬಹಿರಂಗಪಡಿಸಬೇಕಿದೆ. ಸಧ್ಯದ ಪರಿಸ್ಥಿತಿಯಲ್ಲಿ ಯಾವ ಪಕ್ಷದವರೂ ಕೂಡ ಈ ತಮ್ಮ ಕಾರ್ಯಕರ್ತ ಎಂದು ಒಪ್ಪಿಕೊಳ್ಳಲು‌ ಮುಂದಾಗುವುದಿಲ್ಲ ಎಂಬುದು ಸಾರ್ವಜನಕ ವಲಯದಲ್ಲಿ ಚರ್ಚೆಯ ವಿಷಯ.

Related Articles

Leave a Reply

Your email address will not be published. Required fields are marked *

Back to top button
error: Content is protected !!