ಕಾರ್ಯಕ್ರಮ

ಕರ್ನಾಟಕ ವಿಕಾಸ ರಂಗ” ಕುಶಾಲನಗರ ತಾಲ್ಲೂಕು ಘಟಕ ಉದ್ಘಾಟನೆ

ಕುಶಾಲನಗರ, ಡಿ 14: ಕರ್ನಾಟಕ ವಿಕಾಸ ರಂಗ ಕುಶಾಲನಗರ ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮವು ದಿನಾಂಕ 13/12/2025ರಂದು ನಢಯಿತು. ಕುಶಾಲನಗರದ ಮಹಾಲಕ್ಷ್ಮಿ ರೆಸಿಡೆನ್ಸಿ ಹಾಲ್‌ನ ಸಭಾಂಗಣದಲ್ಲಿ ಕರ್ನಾಟಕ ವಿಕಾಸ ರಂಗ ಸಂಘಟನೆಯ ಸಂಸಸ್ಥಾಕ ರಾಜ್ಯಾಧ್ಯಕ್ಷರಾದ ವ.ಚ.ಚೆನ್ನೇಗೌಡರ ಅನುಪಸ್ಥಿತಿಯಲ್ಲಿ ರಾಜ್ಯ ಘಟಕದ ಉಪಾಧ್ಯಕ್ಷರಾದ ಬಿ.ಎಸ್ ಲೋಕೇಶ್ ಸಾಗರ್ ಅವರ ಉದ್ಘಾಟನೆಯೊಂದಿಗೆ ಕರ್ನಾಟಕ ವಿಕಾಸ ರಂಗ ಜಿಲ್ಲಾ ಘಟಕದ ಅಧ್ಯಕ್ಷರಾದ ವೈಲೇಶ ಪಿ.ಎಸ್‌ರವರ ಅಧ್ಯಕ್ಷತೆಯಲ್ಲಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಲಾಯಿತು.
ಸಭೆಯಲ್ಲಿದ್ದ ಸಾಹಿತಿ ಬಂಧುಗಳ ಸಮ್ಮುಖದಲ್ಲಿ ಪದಗ್ರಹಣ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಕರ್ನಾಟಕ ವಿಕಾಸ ರಂಗ ಕುಶಾಲನಗರ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಶ್ರೀಮತಿ ವಿಜಯಶ್ರೀ ಅನಿಲ್ ಕೆದಿಲಾಯರವರು, ಶ್ರೀಮತಿ ವಿನಯಾ ರಾಜಶೇಖರ್‌ರವರು ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಶ್ರೀಮತಿ ದೀಪಿಕಾ ರಾಘವೇಂದ್ರ ರವರು ಕಾರ್ಯದರ್ಶಿಯಾಗಿ, ಶ್ರೀಯುತ ಸುಬ್ರಹ್ಮಣ್ಯ ಆಚಾರ್‌ರವರು ಮತ್ತು ಶ್ರೀಮತಿ ಸರಳಾ ಸುಬ್ರಮಣ್ಯರವರು ಉಪಾಧ್ಯಕ್ಷರಾಗಿಯೂ ಶ್ರೀಮತಿ ಮಮತಾ ರಾಜೇಶ್, ಅಮೃತಾ ರವರು ನಿರ್ದೇಶಕರಾಗಿ ಮತ್ತು ಶ್ರೀಮತಿ ಮಾಲಾಮೂರ್ತಿ.ಎನ್. ರವರು ಕೋಶಾಧಿಕಾರಿಯಾಗಿ ಪದಗ್ರಹಣ ಪ್ರಮಾಣವಚನ ಸ್ವೀಕರಿಸಿದರು. ಕರ್ನಾಟಕ ವಿಕಾಸ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ನಳಿನಿ ಸತ್ಯನಾರಾಯಣ ಹಾಗೂ ಕಾರ್ಯದರ್ಶಿಗಳಾದ ಹೇಮಂತ್ ಪಾರೇರಾರವರು ಉಸ್ಥಿತರಿದ್ದರು. ಸುಂದರ ಕಾರ್ಯಕ್ರವನ್ನು ದೀಪಿಕಾ ರಾಘವೇಂದ್ರ ನಿರೂಪಿಸಿದರು. ನಳಿನಿ ಹೆಚ್. ಆರ್ ಸ್ವಾಗತಿಸಿದರು. ಮಮತಾ ರಾಜೇಶ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!