ಕುಶಾಲನಗರ, ಆ 17: ಕೂಡುಮಂಗಳೂರು ಗ್ರಾಪಂ ಸದಸ್ಯರೂ ಆದ ಪತ್ರಕರ್ತ ಕೆ.ಬಿ.ಶಂಶುದ್ದಿನ್ ಮನೆ ಬುಧವಾರ ಕುಸಿದು ಬಿದ್ದಿದೆ. ಗ್ರಾಪಂ ವ್ಯಾಪ್ತಿಯ ಬಸವೇಶ್ವರ ಬಡಾವಣೆಯಲ್ಲಿರುವ ಮನೆ
ಮಳೆಗೆ ತೀವ್ರ ಶಿಥಿಲಗೊಂಡಿತ್ತು. ಬುಧವಾರ ಬೆಳಗಿನ ಜಾವ ಗೋಡೆ ಕುಸಿದು ಬಿದ್ದಿದೆ. ಕೊಣೆಯೊಳಗೆ ನಿದ್ರಿಸುತ್ತಿದ್ದ ಶಂಶುದ್ದಿನ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದು ಭಾಗದ ಗೋಡೆ ಕುಸಿದು ಬಿದ್ದ ಶಬ್ಧಕ್ಕೆ ಮಲಗಿದ್ದ ಜಾಗದಿಂದ ಮೇಲೆದ್ದು ಬಂದ ಕೂಡಲೆ ಅವರು ಮಲಗಿದ್ದ ಕೋಣೆಯ ಗೋಡೆ ಮಂಚದ ಮೇಲೆ ಕುಸಿದು ಬಿದ್ದಿದೆ.
ಮನೆಯ ಹೊರಗೆ ನಿಲ್ಲಿಸಿದ್ದ ಬೈಕ್ ಮೇಲೆ ಕೂಡ ಗೋಡೆ ಬಿದ್ದ ಕಾರಣ ಬೈಕ್ ಸಂಪೂರ್ಣ ಜಖಂಗೊಂಡಿದೆ.
ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ಜಿಲ್ಲಾ ಪತ್ರಕರ್ತರ ಸಂಘದ, ಪ್ರೆಸ್ ಕ್ಲಬ್ ಅಧ್ಯಕ್ಷರುಗಳು, ತಾಲೂಕು ಸಮಿತಿ ಪ್ರಮುಖರು ಭೇಟಿ ನೀಡಿ ಪರಿಶೀಲಿಸಿದರು.
Back to top button
error: Content is protected !!