ಅವ್ಯವಸ್ಥೆ

ಕೈಗಾರಿಕಾ ಬಡಾವಣೆ ರಸ್ತೆಯ ದುರಸ್ತಿಗೆ ಅಗ್ರಹ: ಸರಿಪಡಿಸದ್ದರೆ ಪ್ರತಿಭಟನೆ ಎಚ್ಚರಿಕೆ.

ಕೂಡಿಗೆ, ನ. 8: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕ್ಷೇತ್ರದಲ್ಲಿರುವ ಸಿ.ಎನ್‌. ಜಿ. ಗ್ಯಾಸ್ ವಿತರಣೆ ಕೇಂದ್ರದಿಂದ ಕೈಗಾರಿಕಾ ಕೇಂದ್ರದಲ್ಲಿರುವ ಬೃಹತ್ ಕಾಫಿ ಸಂಸ್ಕರಣಾ ಘಟಕಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಸಂದರ್ಭದಲ್ಲಿ ರಸ್ತೆಯನ್ನು ಅಗೆದು ಸಂಪರ್ಕದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಇದರಿಂದಾಗಿ ರಸ್ತೆಯು ತೀರಾ ಹಾಳಾಗಿ ಗುಂಡಿಗಳಾಗಿರುವುದರಿಂದಾಗಿ ಲಾರಿ ಮತ್ತು ಕಾರುಗಳ ಚಾಲನೆ ಗೆ ಬಾರಿ ತೊಂದರೆಗಳು ಅಗುತ್ತಿದೆ. ‌
ಅದರೆ ಹಾಳಾಗಿರುವ ರಸ್ತೆಯನ್ನು ಸರಿಪಡಿಸುವ ಎರಡು ತಿಂಗಳುಗಳಿಂದ ಸಂಬಂಧಿಸಿದ ಗ್ಯಾಸ್ ಆಡಳಿತ ಮಂಡಳಿಯವರಿಗೆ ತಿಳಿಸಿದರೂ ಯಾವುದೇ ಕ್ರಮ ವಹಿಸದೆ ನಿರ್ಲಕ್ಷ ಮನೋಭಾವ ತಳಿರುತ್ತಾರೆ, ದುರಸ್ತಿಗೆ ತಿಳಿಸಿರುವ ಸಹ ಇದುವರೆಗೂ ಮುಂದಾಗದಿರುವ ಹಿನ್ನೆಲೆಯಲ್ಲಿ ಸಾಮೀಲ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ, ಮತ್ತು ಕೊಡಗು ಬಡ ಬಳಕು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ. ಹೆಚ್. ಮಹಮ್ಮದ್ ನೇತ್ರತ್ವದಲ್ಲಿ ಅಗ್ರಹ, ಮತ್ತು ಪ್ರತಿಭಟನೆಯನ್ನು ಗ್ಯಾಸ್ ಕೇಂದ್ರದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪತ್ರಿಕಾ ಹೇಳಿಕೆ ನೀಡಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!