ಕುಶಾಲನಗರ, ಅ 30: ಮಡಿಕೇರಿ ಸಾರಿಗೆ ಇಲಾಖೆಯಲ್ಲಿ ಹೊಸದಾಗಿ ನೋಂದಣಿ ಮಾಡಲು ಕೊಟ್ಟಿದಂತಹ ದಾಖಲಾತಿಗಳು ಕಾಣೆಯಾಗಿದ್ದು ಕೇಳಿದರೆ ಸಮರ್ಪಕ ಉತ್ತರ ನೀಡದೆ ಅಧಿಕಾರಿಗಳು ಬೇಜವಬ್ದಾರಿ ತೋರಿದ್ದಾರೆ ಎಂದು ಕರವೇ ಕುಶಾಲನಗರ ತಾಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ ಆರೋಪಿಸಿದ್ದಾರೆ.
ಕುಶಲಾನಗರದ ವ್ಯಕ್ತಿ ಒಬ್ಬರ ವಾಹನ ನೊಂದಣಿ ಮಾಡಲು ನೇರವಾಗಿ ಹೋದ ಕಾರಣ ಅಲ್ಲಿನ ಅಧಿಕಾರಿಗಳು ನೊಂದಣಿಗೆ ನೀಡಿದ ವಾಹನದ ದಾಖಲೆಗಳು ಕಾಣೆಯಾಗಿದೆ ಎಂದು ಸುಮಾರು ಐದು ತಿಂಗಳಿನಿಂದ ಸತಾಯಿಸುತ್ತಿದ್ದಾರೆ. ಅಧಿಕಾರಿಗಳು ಇನ್ನು ಎರಡು ದಿನದೊಳಗೆ ಅವರ ದಾಖಲಾತಿಗಳನ್ನು ಹುಡುಕಿ ವಾಹನದ ನೋಂದಣಿ ಮಾಡಿ ಕೊಡದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕುಶಾಲನಗರ ತಾಲೂಕು ಘಟಕ ದಿಂದ ಸಾರಿಗೆ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುವದಾಗಿ ಅಣ್ಣಯ್ಯ ಎಚ್ಚರಿಸಿದ್ದಾರೆ.
Back to top button
error: Content is protected !!