ಕುಶಾಲನಗರ, ಆ 25: 2025 ರ ಮೇ ಮತ್ತು ಜೂನ್ ಮಾಹೆಯಲ್ಲಿ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದಿಂದ ನಡೆದ ಭರತನಾಟ್ಯ ಜೂನಿಯರ್ ಹಾಗೂ ಸೀನಿಯರ್ ಹಂತದ ಪರೀಕ್ಷೆಗಳಲ್ಲಿ ನೃತ್ಯ ವಿದ್ಯಾಪೀಠದ ಕುಶಾಲನಗರ ಶಾಖೆಯ ವಿದ್ಯಾರ್ಥಿನಿಯರು ಗುರು ವಿದುಷಿ ಸಿ ಎನ್ ಅನಿತರವರ ಮಾರ್ಗದರ್ಶನದಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿರುತ್ತಾರೆ.
ಜೂನಿಯರ್ ಹಂತದ ಫಲಿತಾಂಶ :
• ಕುಶಾಲನಗರದ ದಂತ ವೈದ್ಯರಾದ ಶ್ರೀಯುತ ಡಾ. ರಾಮ ಎಂ ಜಿ ಹಾಗೂ ಶ್ರೀಮತಿ ದಿವ್ಯ ಭಟ್ ಎಂ ಆರ್ ದಂಪತಿಯರ ಸುಪುತ್ರಿ ಕುಮಾರಿ ಅಹಲ್ಯ ಎಂ ಆರ್ 77.5% ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾಳೆ. ಈಕೆ ಫಾತಿಮಾ ಕಾನ್ವೆಂಟ್ನಲ್ಲಿ ಐದನೇ ತರಗತಿಯ ವಿದ್ಯಾರ್ಥಿನಿ.
• ಕುಶಾಲನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷರು ಆಗಿರುವ ಶ್ರೀಯುತ ಕೆ ಎಸ್ ನಾಗೇಶ್ ಮತ್ತು ಪಾಲಿಬೆಟ್ಟದ “ನಮ್ಮ ಹೈಸ್ಕೂಲ್” ನ ಸಹ ಶಿಕ್ಷಕಿಯಾಗಿರುವ ಶ್ರೀಮತಿ ಶಾಲಿನಿ ನಾಗೇಶ್ ರವರ ಸುಪುತ್ರಿ ಕುಮಾರಿ ಸಾಗರಿಕ ಎನ್ 76.25% ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾಳೆ. ಈಕೆ ಫಾತಿಮಾ ಕಾನ್ವೆಂಟ್ನಲ್ಲಿ 6ನೇ ತರಗತಿಯ ವಿದ್ಯಾರ್ಥಿನಿ.
• ಬೆಟ್ಟದಪುರದ ಶ್ರೀಯುತ ನವೀನ್ ಹಾಗೂ ಶ್ರೀಮತಿ ಚೈತ್ರ ನವೀನ್ ರವರ ಪುತ್ರಿ ಕುಮಾರಿ ಸಮೀಕ್ಷಾ ಎನ್ ದ್ವಿತೀಯ ಅರ್ಜಿಯಲ್ಲಿ ಉತ್ತೀರ್ಣಳಾಗಿದ್ದಾಳೆ.
ಸೀನಿಯರ್ ಹಂತ :
• ಕುಶಾಲನಗರದ “ಕೆಫೆ 1854” ರ ಸಂಸ್ಥಾಪಕರಾಗಿದ್ದ ದಿ. ಶ್ರೀ ನರೇಂದ್ರ ಹೆಬ್ಬಾರ್ ಹಾಗೂ ಪ್ರಸ್ತುತ “ಕೆಫೆ 1854″ರ ಮಾಲೀಕರಾದ ಶ್ರೀಮತಿ ಶಾರದ ಎಚ್ ಎಸ್ ರವರ ಸುಪುತ್ರಿ ಕುಮಾರಿ ಧಿತಾ ಎಂ ಎನ್ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾಳೆ. ಪ್ರಸ್ತುತ ಈಕೆ ಐಶ್ವರ್ಯ ಇಂಡಿಪೆಂಡೆಂಟ್ ಕಾಲೇಜಿನಲ್ಲಿ ಎರಡನೇ ಪಿಯುಸಿಯ ವಿದ್ಯಾರ್ಥಿನಿಯಾಗಿದ್ದಾಳೆ.
ಕುಶಾಲನಗರದಲ್ಲಿ ಸುಮಾರು ಮೂರು ವರ್ಷಗಳಿಂದ ನೃತ್ಯ ವಿದ್ಯಾಪೀಠವು ಕಾರ್ಯ ನಿರ್ವಹಿಸುತ್ತಿದ್ದು, ನಮ್ಮ ಪುಟ್ಟ ಪ್ರತಿಭೆಗಳನ್ನು ನೃತ್ಯ ಕ್ಷೇತ್ರಕ್ಕೆ ಪರಿಚಯಿಸುವ ಹಂಬಲದಲ್ಲಿ ಇದ್ದೇವೆ. ಈ ವರ್ಷದ ಈ ಫಲಿತಾಂಶವನ್ನು ನಿಮ್ಮೊಂದಿಗೆ ನಾವು ಸಂಭ್ರಮಿಸುತ್ತ ಇದ್ದೇವೆ.
ತಮ್ಮ ಪ್ರೋತ್ಸಾಹವನ್ನು ಎದುರು ನೋಡುತ್ತಾ, ಸಹಕಾರವನ್ನು ಸದಾ ಸ್ಮರಿಸುತ್ತಾ, ವಂದನಾಪೂರ್ವಕವಾಗಿ
ವಿಶ್ವಾಸದೊಂದಿಗೆ
ಶ್ರೀಮತಿ ಡಿ ಎಸ್ ಕೌಸಲ್ಯ
(ಗೌರವ ಕಾರ್ಯದರ್ಶಿಗಳು)
ನೃತ್ಯ ವಿದ್ಯಾಪೀಠ (ರಿ.)
ಮೈಸೂರು
ದಿ : 25.08.2025
Back to top button
error: Content is protected !!