ಕಾರ್ಯಕ್ರಮ

ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ 2.93 ಲಕ್ಷ ಲಾಭಾಂಶ

ಕುಶಾಲನಗರ ಆ‌ 18: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಹಾಜರಿದ್ದ ಸಂಘದ ಸದಸ್ಯರು ಹಾಲು ಉತ್ಪಾದಕರಿಗೆ ಹೆಚ್ಚು ಅನುದಾನ ನೀಡುವ ಬಗ್ಗೆ, ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಚರ್ಚೆ ನಡೆಸಿದರು.
ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಮಾತನಾಡಿ, ಸಂಘವು 2024-25ನೇ ಸಾಲಿನಲ್ಲಿ ರೂ 2.93 ಲಕ್ಷ ಲಾಭಾಂಶ ಗಳಿಸಿದೆ. ಸದಸ್ಯರ ಅಭಿವೃದ್ದಿ ಪರವಾದ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಈ ಮೂಲಕ ಸಂಘದ ಅಭಿವೃದ್ಧಿಗೆ ಅನುಕೂಲವಾಗುವಂತೆ ಎಲ್ಲಾ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು ಎಂದರು.
ಇದೇ ಸಂದರ್ಭ ಹೆಚ್ಚು ಹಾಲು ಹಾಕಿದ ರೈತ ಸದಸ್ಯರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಈ ಸಂದರ್ಭ ಉಪಾಧ್ಯಕ್ಷೆ ನರಸಮ್ಮ, ನಿರ್ದೇಶಕರಾದ ಕೆ.ಎಸ್. ಹರೀಶ್, ಕೆ. ಹೆಚ್. ಗಿರೀಶ್, ವಿಶ್ವೇಶ್ವರಯ್ಯ, ಕೆ.ಎ.‌ರವಿಕುಮಾರ್, ನಟೇಶ್ ಕುಮಾರ್, ಪುನೀತ್ ಕುಮಾರ್, ಗೌತಮ್ ಕುಮಾರ್‌, ಅಣ್ಣಾಜಿ ನಾಯಕ್,ಜಯಮ್ಮ , ಸಹಕಾರ ಸಂಘಗಳ ವಿಸ್ತಾರಣಾಧಿಕಾರಿ ಬಿ.ಬಿ. ವೀಣಾ, ಕಾರ್ಯದರ್ಶಿ ಬಿಂದು ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!