ಕುಶಾಲನಗರ, ಆ 06:
ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಣ್ಣದಕೆರೆಯ ಸರಕಾರಿ ಜಾಗದಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಿದ್ದು ಸಾರ್ವಜನಿಕ ಉಪಯುಕ್ತವಾಗಲು ಮುಂದಾದ ಜಿಲ್ಲಾಡಳಿತ ಕ್ರಮ ವಿರೋಧ ಮಾಡಿರುವ ಅಲ್ಲಿನ 2 ಕುಟುಂಬಗಳು ಮತ್ತು ಬಸವನಹಳ್ಳಿಯ ಲ್ಯಾಂಪ್ ಸೊಸೈಟಿ ಅಧ್ಯಕ್ಷರಾದ ಆರ್. ಕೆ. ಚಂದ್ರು ಅವರು ಇದನ್ನು ವಿರೋಧ ಮಾಡಿದ್ದಾರೆ.
ಪತ್ರಿಕಾಗೋಷ್ಠಿ ಕರೆದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಎಲ್ಲಾ ಸದಸ್ಯರ ಮೇಲೆ ಆರೋಪ ಮಾಡಿದ್ದಾರೆ.
ಇದರ ವಿರುದ್ಧ ಗುಡ್ಡೆಹೊಸೂರು ಹಿತರಕ್ಷಣ ಸಮಿತಿಯ ಅಧ್ಯಕ್ಷರಾದ ಬಿ. ಏನ್.ಶಶಿಕುಮಾರ್
,ಉಪಧ್ಯಕ್ಷರಾದ ಪ್ರದೀಪ್. ಬಿ. ಎಂ, ಕಾರ್ಯದರ್ಶಿ ಅಭಿಷೇಕ್. ಎಂ, ಸದಸ್ಯರಾದ ಅರುಣ್, ಸುಬ್ಬಯ್ಯಾ(ಪಪ್ಪೀ ), ಚಂದ್ರುಶೇಖರ್, ಕಿಶೋರ್ ಒಳಗೊಂಡ ಸದಸ್ಯರ ತಂಡ ಜಿಲ್ಲಾಧಿಕಾರಿ ಮತ್ತು ಪೊಲೀಸ್ ದಂಡಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ಅದೇ ಸ್ಥಳದಲ್ಲಿ ಸ್ಮಶಾನ ಕೊಡಬೇಕೆಂದು ಮನವಿ ಮಾಡಿಕೊಂಡರು.
Back to top button
error: Content is protected !!