ಕಾಮಗಾರಿ

ರಂಗಸಮುದ್ರ-ಮಾವಿನಹಳ್ಳ ಮಾರ್ಗದಲ್ಲಿ ಕುಸಿದ ಸೇತುವೆ ತಡೆಗೋಡೆಗೆ ತಾತ್ಕಾಲಿಕ ಕಾಯಕಲ್ಪ

ಕುಶಾಲನಗರ, ಜು 01: ಕುಶಾಲನಗರ ತಾಲ್ಲೂಕಿನ ರಂಗಸಮುದ್ರ ಮಾವಿನ ಹಳ್ಳ ಸೇತುವೆ ಪಕ್ಕದಲ್ಲಿ ತೀವ್ರ ಮಳೆಯಿಂದಾಗಿ ಬರೆ ಕುಸಿತ ಉಂಟಾಗಿ ರಸ್ತೆ ಸಂಚಾರ ಅಪಾಯದ ಸ್ಥಿತಿಯಲ್ಲಿತ್ತು. ಶಾಸಕ ಡಾ.ಮಂತರ್ ಗೌಡ ರವರು, ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನೀರಾವರಿ ನಿಗಮದಿಂದ ತಾತ್ಕಾಲಿಕವಾಗಿ ದುರಸ್ತಿ ಕಾರ್ಯಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ನಿಗಮದ ಅಭಿಯಂತರ ಕಿರಣ ಡಿ.ಡಿ.ಕಾಮಗಾರಿ ಪರಿಶೀಲನೆ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!