
ಕುಶಾಲನಗರ, ಮೇ 25: ಕುಶಾಲನಗರದ ಪ್ರಮುಖ ಪ್ರವಾಸಿತಾಣ ಕಾವೇರಿ ನಿಸರ್ಗಧಾಮದಲ್ಲಿ ಸರಕಾರದಿಂದ 2017 ರಲ್ಲಿ ರೂ 48 ಲಕ್ಷ ವೆಚ್ಚದಲ್ಲಿ ಮುಖ್ಯರಸ್ತೆಯಿಂದ ಕಾವೇರಿನದಿ ತಟದ ತನಕ ನಿರ್ಮಿಸಿದ ತಡೆಗೋಡೆಯನ್ನು ಅಕ್ರಮವಾಗಿ ನೆಲಸಮಗೊಳಿಸಿದ್ದು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಎನ್.ಟಿ.ಸಿ.ವರ್ತಕರು ಆರೋಪಿಸಿದ್ದಾರೆ. ನಿಸರ್ಗಧಾಮ ಒಳಪ್ರವೇಶಿಸುವ ಮಾರ್ಗದ ವಾಹನ ನಿಲುಗಡೆ ಸ್ಥಳಕ್ಕೆ ಹೊಂದಿಕೊಂಡಂತೆ 190ಮೀ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ತಡೆಗೋಡೆಯ ಒಂದು ಭಾಗವನ್ನು 30 ಅಡಿಗಳಷ್ಟು ಅಕ್ರಮವಾಗಿ ನೆಲಸಮಗೊಳಿಸಿ ಪಕ್ಕದ ಜಾಗಕ್ಕೆ ತೆರಳಲು ಮಾರ್ಗ ಸೃಷ್ಠಿಸಿರುವುದು ಕಂಡುಬಂದಿದೆ. ಈ ಬಗ್ಗೆ ಇಲಾಖಾ ಅಧಿಕಾರಿಗಳು ಕಂಡೂ ಕಾಣದಂತೆ ಮೌನ ವಹಿಸಿರುವುದು ಅನುಮಾನಕ್ಕೆ ಎಡೆಮಾಡಿದ್ದು ಈ ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ ಎಂದು ವರ್ತಕರಾದ ಸಲೀಂ, ಲೋಕೇಶ್, ಶರಿಯಾರ್, ಕಬೀರ್, ನಿಯಾದ್, ಆಸಿಫ್ ಆರೋಪಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಅರಣ್ಯ ಇಲಾಖೆ ಹಿರಿಯ ಅಧಿಕಾರಿ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.
Back to top button
error: Content is protected !!