ಪ್ರಕಟಣೆ
ಇ-ಖಾತಾ ಅಭಿಯಾನ: ಸದುಪಯೋಗಪಡಿಸಿಕೊಳ್ಳಲು ಶಾಸಕ ಡಾ.ಮಂತರ್ ಗೌಡ ಕರೆ

ಕುಶಾಲನಗರ, ಫೆ 24: ರಾಜ್ಯ ಸರಕಾರದ ಪೌರಾಡಳಿತ ಇಲಾಖೆ ವತಿಯಿಂದ ರಾಜ್ಯಾದ್ಯಂತ ಇ-ಖಾತಾ ಅಭಿಯಾನ ಆರಂಭಿಸಿದ್ದು ಕುಶಾಲನಗರ ಪುರಸಭೆ ವ್ಯಾಪ್ತಿಯ ನಿವಾಸಿಗಳು ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಡಾ.ಮಂತರ್ ಗೌಡ ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೆ 1500 ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಹಲವು ಸಮಯಗಳಿಂದ ಕಾಯುತ್ತಿದ್ದವರಿಗೆ ಸರಕಾರ ಅವಕಾಶ ಒದಗಿಸಿದ್ದು, ಅಗತ್ಯ ದಾಖಲೆಗಳೊಂದಿಗೆ ಪುರಸಭೆ ಸಂಪರ್ಕಿಸಿ ತಮ್ಮ ಆಸ್ತಿಗಳ ದಾಖಲಾತಿಗಳ ತಿದ್ದುಪಡಿ ಮಾಡಿಸಿಕೊಳ್ಳುವಂತೆ, ಈ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ಪುರಸಭೆ ಸದಸ್ಯರಲ್ಲಿ ಕೋರಿದರು.ಪುರಸಭೆ ವಾಣಿಜ್ಯ ಸಂಕೀರ್ಣ ಕಾಮಗಾರಿ ಪುನರಾರಂಭಗೊಂಡಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.


