ಪೊಲೀಸ್

ಶಾಂತಿ, ಸುವ್ಯೆವಸ್ಥೆಗಾಗಿ ಪಥಸಂಚಲನ

ಕುಶಾಲನಗರ ಫೆ 02:ಇತ್ತೀಚಿಗೆ ಕೊಡಗು ಜಿಲ್ಲೆಯಲ್ಲಿ ಶಾಂತಿ ಕದಡುವ ಶಕ್ತಿ ಬಲಿಷ್ಠವಾಗುತ್ತಿದೆ. ಅದನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೊಡಗು ಪೊಲೀಸ್ ಮುಂದಾಗಿದ್ದು ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಕ್ಷಿಪ್ರಪಡೆ ಮತ್ತು ಪೊಲೀಸರು ಜಂಟಿಯಾಗಿ ಮತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆಸುತ್ತಿದೆ. ಅದರಂತೆ ಭಾನುವಾರ ಕುಶಾಲನಗರದ ಬೈಚನಹಳ್ಳಿಯಿಂದ ಆರಂಭಿಸಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಮೂಲಕ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಸಾಗಿ, ದಂಡಿನಪೇಟೆ, ಮೈಸೂರು ಮಡಿಕೇರಿ ರಸ್ತೆ, ರಥ ಬೀದಿಯಲ್ಲಿ ಹೋಗಿ ಕುಶಾಲನಗರ ಡಿವೈಎಸ್ಪಿ ಕಚೇರಿ ತನಕ ಸಂಚರಿಸಿ ಸಾರ್ವಜನಿಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಿದೆ ಎಂದು ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ತಿಳಿಸಿದರು.

ಬೆಳಗಾವಿ ಯೂನಿಟ್ ನ 97 ಬೆಟಾಲಿಯನ್ ನ 30 ಪೇದೆಗಳು ಸಹಾಯಕ ಕಮಾಡೆಂಟ್ ಅನೀಲ್ ಜಾದವ್ ನೇತೃತ್ವದಲ್ಲಿ ಮತ್ತು ಕೊಡಗು ಪೊಲೀಸರು 20 ಪೇದೆಗಳು ಪಥಸಂಚಲನ ನಡೆಸಿದರು.
ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ, ಕ್ಷಿಪ್ರಪಡೆಯ ನಿರೀಕ್ಷಕ ನರಸಿಂಹ ಮೂರ್ತಿ, ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್, ಸಂಚಾರಿ ಠಾಣೆಯ ಠಾಣಾಧಿಕಾರಿ ಗಣೇಶ್, ನಗರ ಠಾಣೆಯ ಗೀತ ಸೇರಿದಂತೆ ಪೊಲೀಸರು ಪಥಸಂಚಲನದಲ್ಲಿ ಭಾಗವಹಿಸಿದ್ದರು.
ಕ್ಷಿಪ್ರ ಪಡೆಯ ಸಹಾಯಕ ಕಮಾಡೆಂಟ್ ಅನೀಲ್ ಜಾದವ್ ಮತ್ತು ಕ್ಷಿಪ್ರಪಡೆಯ ನಿರೀಕ್ಷಕ ನರಸಿಂಹ ಮೂರ್ತಿ ಅವರನ್ನು ಸನ್ಮಾನಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!