ಕುಶಾಲನಗರ, ನ 06: ಕೊಡಗು ಜಿಲ್ಲಾ ದುರ್ಗಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ನಿಯಮಿತದ ವತಿಯಿಂದ ಕುರಿಗಾಹಿಗಳಿಗೆ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಸೋಮವಾರಪೇಟೆ ತಾಲೂಕು ಅಬ್ಬೂರ್ ಕಟ್ಟೆ ಯಲಕನೂರಿ ಗೆ ಭೇಟಿ ಕೊಟ್ಟು ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿಯನ್ನು ಪಡೆದುಕೊಳ್ಳುವ ಬಗ್ಗೆ
ಅರ್ಜಿಯನ್ನು ವಿತರಣೆ ಮಾಡಿ ಸರ್ಕಾರದ ವತಿಯಿಂದ ಸಿಗುವಂತ ಸೌಲಭ್ಯಗಳು ಮತ್ತು ಸರ್ಕಾರದ ವತಿಯಿಂದ ಗುರುತಿನ ಚೀಟಿಯನ್ನು ಪಡೆದುಕೊಂಡರೆ ದೊರೆಯುವ ಸೌಲಭ್ಯಗಳ ಬಗ್ಗೆ ಸಂಘದ ಜಿಲ್ಲಾಧ್ಯಕ್ಷ ಅಧ್ಯಕ್ಷ ಪ್ರಭಾಕರ್ ಮಾಹಿತಿ ಒದಗಿಸಿದರು.
ತೊರೆನೂರು ಕೃಷಿ ಸಂಘದ ಅಧ್ಯಕ್ಷರು ಮತ್ತು ಕುರಿಹುಣ್ಣಿ ಸಂಘದ ನಿರ್ದೇಶಕರಾದ ಸಿ.ಕೆ. ಉದಯಕುಮಾರ್ ಸಂಘದ ಲಾಭಾಂಶಗಳ ಬಗ್ಗೆ ತಿಳಿಸಿದರು.
ಸಂಘದ ಕಾರ್ಯದರ್ಶಿ ಭರಮಣ್ಣ ಬೆಟಗೇರಿ, ನಿರ್ದೇಶಕರಾದ ಜಗದೀಶ್, ಕುರಿಗಾಹಿಗಳಾದ ಶಂಕ್ರಪ್ಪ, ರವಿ, ಬಸಪ್ಪ, ಚಂದ್ರ, ರಮೇಶ್, ಪರಮೇಶ್ ಮತ್ತು ಗ್ರಾಮದ ಸಂಘದ ಸದಸ್ಯರು ಈ ಸಂದರ್ಭ ಪಾಲ್ಗೊಂಡಿದ್ದರು
Back to top button
error: Content is protected !!