ಕುಶಾಲನಗರ ಆ 31: ಕ್ರೀಡಾಕೂಟಗಳಿಂದ ಉತ್ತಮ ಬಾಂಧವ್ಯ ಹಾಗೂ ಆರೋಗ್ಯ ವೃದ್ದಿಯಾಗುತ್ತದೆ ಎಂದು ಕುಶಾಲನಗರ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಹೇಳಿದರು.
ಕುಶಾಲನಗರದ ಜಂಪ್ ಸ್ಮಾಶ್ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಾ ಕ್ರೀಡೆಗಳಿಗಿಂತಲೂ ಷಟಲ್ ಬ್ಯಾಡ್ಮಿಂಟನ್ ಕ್ರೀಡೆ ಬಾಲಕರಿಂದ ವಯೋವೃದ್ದರವರೆಗೆ ಆಕರ್ಷಣೆಯಾಗುವ ಕ್ರೀಡೆಯಾಗಿದೆ ಎಂದರು.
ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಷಟಲ್ ಬ್ಯಾಡ್ಮಿಂಟನ್ ಹಿರಿಯ ಆಟಗಾರರಾದ ನವೀನ್, ಕೆ.ಎಸ್.ಮೂರ್ತಿ, ನಿರಂಜನ್, ಸೋಮು, ಮಹೇಶ್, ಜಗ ಮಾಸ್ಟರ್ ಮೊದಲಾದವರಿದ್ದರು.
ಪಂದ್ಯಾವಳಿಯ ವಿಜೇತರಿಗೆ ಮೊದಲ ಬಹುಮಾನ 50 ಸಾವಿರ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ, ಎರಡು ಹಾಗೂ ಮೂರನೇ ಬಹುಮಾನವಾಗಿ 30 ಹಾಗೂ 20 ಸಾವಿರ ಮತ್ತು ಆಕರ್ಷಕ ಟ್ರೋಫಿಗಳನ್ನು ನೀಡುವುದಾಗಿ ಆಯೋಜಕ ಆಕಾಶ್ ಹೇಳಿದರು.
Back to top button
error: Content is protected !!