ಕುಶಾಲನಗರ, ಆ. 22: ಜಿಲ್ಲಾ ಪಶುಪಾಲನಾ ಇಲಾಖೆಯ ವತಿಯಿಂದ 21ನೇ ಜಾನುವಾರು ಗಣತಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಗಣತಿದಾರರಿಗೆ ಕೂಡಿಗೆಯ ಜಿಲ್ಲಾ ಕೋಳಿ ಸಾಕಾಣಿಕೆ ಕೇಂದ್ರದ ಸಭಾಂಗಣದಲ್ಲಿ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪಶುಪಾಲನಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಡಾ. ಲಿಂಗರಾಜ್ ದೊಡ್ಡ ಮುನಿನವರು ನೆರವೇರಿಸಿ ತರಬೇತಿಯಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ಪಡೆದುಕೊಂಡು ಯೋಜನೆಯನ್ನು ಸಫಲಗೊಳಿಸಬೇಕು ಎಂದರು.
ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾದ್ಯಂತ 59 ಗಣತಿದಾರರು ಭಾಗವಹಿಸಿದ್ದರು. ಗಣತಿದಾರರು ಜಿಲ್ಲೆಯ ನಗರ, ಮತ್ತು ಗ್ರಾಮಾಂತರ ಪ್ರದೇಶಗಳ ಮನೆಮನೆಗೆ ತೆರಳಿ ಅವರುಗಳಲ್ಲಿ ಸಾಕಿರುವ ಪ್ರಾಣಿಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಪಡೆದುಕೊಂಡು ಆಪ್ ನಲ್ಲಿ ದಾಖಲಿಸುವುದರ ಬಗ್ಗೆ ಮಾಹಿತಿಯನ್ನು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಶಿಲ್ಪಿ, ಡಾ. ಬಹುಷಕುಮಾರ್, ಡಾ. ನಾಗರಾಜ್ ತರಬೇತಿ ನೀಡಿದರು.
Back to top button
error: Content is protected !!