ಕುಶಾಲನಗರ, ಆ 13:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕುಶಾಲನಗರ ತಾಲೂಕು ಕೂಡುಮಂಗಳೂರು ಸಮುದಾಯ ಭವನದಲ್ಲಿ ಪೌಷ್ಟಿಕ ಆಹಾರ ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮವನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ರವರು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು.
ಆರೋಗ್ಯ ಇಲಾಖೆಯ ಗೀತಾ ರವರು ಮಾತನಾಡಿ ಪೌಷ್ಟಿಕ ಆಹಾರಗಳ ಮಾಹಿತಿ ಮತ್ತು ಸಿರಿಧಾನ್ಯಗಳಿಂದ ಸಿಗುವಂತ ಪೌಷ್ಟಿಕತೆಯ ಬಗ್ಗೆ ಮಾಹಿತಿ ನೀಡಿದರು ಅಧ್ಯಕ್ಷರಾದ ಭಾಸ್ಕರ ನಾಯಕ್ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ಒಂದು ಸರ್ಕಾರ ಗ್ರಾಮ ವ್ಯಾಪ್ತಿಯಲ್ಲಿ ಮಾಡುವಂತ ಹಲವಾರು ಕಾರ್ಯಕ್ರಮಗಳನ್ನು ಕೂಡ ಧರ್ಮಸ್ಥಳ ಸಂಘ ವತಿಯಿಂದ ಅರ್ಥಪೂರ್ಣವಾಗಿ ನಡೆಸುತ್ತಿರುವುದನ್ನು ಸ್ಲಾಗಿಸಿದರು ಎಲ್ಲರೂ ಕೂಡ ಆರೋಗ್ಯದತ್ತ ಗಮನಹರಿಸಬೇಕು ಮಕ್ಕಳ ತಾಯಂದಿರು ಪೌಷ್ಟಿಕ ಆಹಾರಗಳು ಸೇವಿಸುವ ಮುಖಾಂತರ ಅಪೌಷ್ಟಿಕತೆಯನ್ನು ದೂರ ಮಾಡಬೇಕು ಎಂದು ಮನವರಿಕೆ ಮಾಡಿದರು ನಂತರ ಮಹಿಳೆಯರು ತಮ್ಮ ಗ್ರಾಮದ ಸಮಸ್ಯೆಯನ್ನು ಅಧ್ಯಕ್ಷರು ಬಳಿ ತಿಳಿಸಿದರು ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಕರೆ ಮಾಡಿ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದರು.
ಈ ಸಂದರ್ಭ ಒಕ್ಕೂಟದ ಅಧ್ಯಕ್ಷರು ಗಿರೀಶ್ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಡುಗೆ ಗೀತಾ ಕುಶಾಲನಗರ ವಲಯದ ಮೇಲ್ವಿಚಾರಕರು ಪೂರ್ಣಿಮಾ. ಜ್ಞಾನವಿಕಾಸ ಸಮನ್ವಯ ಅಧಿಕಾರಿ ಕವನ ಸೇವಾ ಪ್ರತಿನಿಧಿ ನಿರ್ಮಲ. ಹಾಗೂ ಅಭ್ಯುದಯ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಹಾಗೂ. ಶಾರದಾ ಮಹಿಳಾ ಸಮಾಜದ ಅಧ್ಯಕ್ಷರು ಅರುಣಾಕ್ಷಿ ಮತ್ತು ಎಲ್ಲಾ ತಂಡದ ಸದಸ್ಯರು ಇದ್ದರು.
Back to top button
error: Content is protected !!