ಕುಶಾಲನಗರ, ಆ 13: ಹಿಂದು ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಜನ ಜಾಗೃತಿಗಾಗಿ ಆ. 14ರ ಬುಧವಾರ ಸಂಜೆ ಕುಶಾಲನಗರದಲ್ಲಿ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದು ಜಾಗರಣ ವೇದಿಕೆ ಮಾಹಿತಿ ಸಂಪರ್ಕ ಪ್ರಮುಖ ಎಲ್. ಹರೀಶ್ ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಪಂಜಿನ ಮೆರವಣಿಗೆ 14 ರಂದು ಸಂಜೆ 6.30 ಕ್ಕೆ ಗಂಟೆಗೆ ಶ್ರೀ ಮಾರಿಯಮ್ಮ ದೇವಸ್ಥಾನದಿಂದ ಆರಂಭವಾಗಲಿದೆ.
ನಂತರ ಕುಶಾಲನಗರದ ಪ್ರಮುಖ ಬೀದಿಗಳ ಮೂಲಕ ರಥಬೀದಿ, ಐ.ಬಿ ಮಾರ್ಗವಾಗಿ ರೈತ ಸಹಕಾರ ಭವನದವರೆಗೆ ಮೆರವಣಿಗೆ ಸಾಗಲಿದೆ. ನಂತರ ರೈತ ಸಹಕಾರ ಭವನದಲ್ಲಿ ಸಭಾ ಕಾರ್ಯಕ್ರಮನಡೆಯಲಿದೆ.
ನ್ಯಾಯಾಂಗ ಇಲಾಖೆ ನಿವೃತ್ತ ಸಿಬ್ಬಂದಿ ಹಾ.ತಿ. ಜಯಪ್ರಕಾಶ್, ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ ಉಡುಪಿಯ ಶ್ರೀ ಕಾಂತ್ ಶೆಟ್ಟಿ ದಿಕ್ಸೂಚಿ ಭಾಷಣ
ಮಾಡಲಿದ್ದಾರೆ. ಕುಶಾಲನಗರ ಸೇರಿದಂತೆ ಸೋಮವಾರಪೇಟೆ, ಸುಂಟಿಕೊಪ್ಪ, ನೆಲ್ಲಿಹುದಿಕೇರಿ ಮತ್ತಿತರ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಕುಶಾಲನಗರದ ಹಿಂದುಜಾಗರಣ ವೇದಿಕೆಯ ಪ್ರಮುಖರಾದ ದಿನೇಶ್, ವಿ.ಹೆಚ್, ಪ್ರಶಾಂತ್, ಪ್ರಜ್ವಲ್, ಆರ್ಶಿತ್ ಹಾಜರಿದ್ದರು.
Back to top button
error: Content is protected !!