ಹುಣಸೂರು.ಜು.28.
ಸಾಲಗಾರರ ಕಾಟದಿಂದ ಹೆದರಿದ ಆಟೋಚಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕುಟುವಾಡಿಯಲ್ಲಿ ಜರುಗಿದೆ.
ಹುಣಸೂರು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಟುವಾಡಿ ಗ್ರಾಮದ ಆಟೋ ಚಾಲಕ ಪ್ರಸಾದ್(29) ಜುಲೈ 20 ರಂದು ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
ಈ ಸಂಬಂಧ ಕುಟುಂಬದವರು
ಆಟೋದಲ್ಲಿ ಹುಡುಕಾಡಿದ ವೇಳೆ ಡೆತ್ ನೋಟ್ ಪತ್ತೆಯಾಗಿದ್ದು.
ತಾನು ಪೈನಾನ್ಸ್ ಮಧು ಎಂಬಾತನಿಂದ ಸ್ನೇಹಿತ ಟೆಂಪೋ ಕಿರಣ್ ರವರ ಜಾಮೀನು ನೀಡಿ 5 ಲಕ್ಷರೂ ಸಾಲ ಪಡೆದಿದ್ದು. ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಇವರು ನಿತ್ಯ ಮನೆಗೆ ಬಂದು ಕೂಗಾಟ ನಡೆಸಿ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾರೆಂದು ಪತ್ನಿ ಲಕ್ಷ್ಮಿ ಬಿಳಿಕೆರೆ ಠಾಣೆಗೆ ದೂರು ನೀಡಿದ್ದರು.
ಶವವಾಗಿ ಪತ್ತೆ:
ನಾಪತ್ತೆಯಾಗಿದ್ದ ಪ್ರಸಾದ್ ಶವ ಸರಗೂರು ತಾಲೂಕಿನ ಕಪಿಲಾ ನದಿ ದಂಡೆಯ ಸೋಮೇಶ್ವರ ದೇವಾಲಯದ ಬಳಿ ಪತ್ತೆಯಾಗಿದ್ದು. ಈ ಸಂಬಂಧ ಸರಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು. ಶವವನ್ನು ಶವಾಗಾರಕ್ಕೆ ಸಾಗಿಸಿ. ಬಿಳಿಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
Back to top button
error: Content is protected !!