ಕ್ರೀಡೆ

PACS ಕ್ರೀಡಾಕೂಟ: ವಿ.ಪಿ ಶಶಿಧರ್ ನಾಯಕತ್ವದ ರಾಹುಲ್ ದ್ರಾವಿಡ್ ತಂಡ ಚಾಂಪಿಯನ್

ಕುಶಾಲನಗರ. ಜೂ 21: ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ  ಎರಡನೇ ವರ್ಷದ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿ.ಪಿ. ಶಶಿಧರ್ ನಾಯಕತ್ವ ರಾಹುಲ್ ದ್ರಾವಿಡ್ ತಂಡ ಚಾಂಪಿಯನ್
ಕುಶಾಲನಗರದ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ. ವಿ.ಪಿ ಶಶಿಧರ್ ಅವರ ನಾಯಕತ್ವದ ರಾಹುಲ್ ದ್ರಾವಿಡ್ ತಂಡ ಮತ್ತು ದಿಲೀಪ್ ನಾಯಕತ್ವದ ಕೆ.ಎಲ್. ರಾಹುಲ್ ತಂಡ ಫೈನಲ್ ಪ್ರವೇಶಿಸಿತ್ತು. ಪಂದ್ಯಾಟದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ವಿ.ಪಿ ಶಶಿಧರ್ ಅವರ ನಾಯಕತ್ವದ ರಾಹುಲ್ ದ್ರಾವಿಡ್ ತಂಡ 6 ಓವರ್ ಗಳಲ್ಲಿ ದಿಲೀಪ್ ನಾಯಕತ್ವದ ಕೆ ಎಲ್ ರಾಹುಲ್ ತಂಡವನ್ನು 32 ರನ್ ಗಳಿಗೆ ಕಟ್ಟಿ ಹಾಕಿತು. ಇದನ್ನು ಬೆನ್ನಟ್ಟಿದ ವಿ.ಪಿ ಶಶಿಧರವರ ನಾಯಕತ್ವದ ರಾಹುಲ್ ದ್ರಾವಿಡ್ ತಂಡ.4.3 ಓವರ್ ಗಳಿಗೆ.35 ರನ್ ಗಳಿಸಿ ಜಯಗಳಿಸಿತು. ರಾಹುಲ್ ದ್ರಾವಿಡ್ ತಂಡದ ಪರವಾಗಿ ಶರತ್ 17 ರನ್ ಜಯಪ್ರಕಾಶ್ 10 ರನ್ ಗಳಿಸಿದರು ಪಂದ್ಯಾವಳಿಯ ಉತ್ತಮ ಬ್ಯಾಟ್ಸ್ ಮ್ಯಾನ್ ಆಗಿ ಸಂತೋಷ್ ಹೊರಹೊಮ್ಮಿದರೆ. ಉತ್ತಮ ಬೌಲರ್ ಆಗಿ ರಾಹುಲ್ ದ್ರಾವಿಡ್ ತಂಡದ ಸಲ್ಮಾನ್ ಬಚ್ಚೆ ಆಯ್ಕೆಯಾದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!