ಕಾರ್ಯಕ್ರಮ

ಕುಶಾಲನಗರ ಚೇಂಬರ್ ಅಪ್ ಕಾಮರ್ಸ್ ವತಿಯಿಂದ ವರ್ತಕರ ಸ್ನೇಹ ಮಿಲನ ಕಾರ್ಯಕ್ರಮ

ಕೊಡಗು ಟ್ಯಾಕ್ಸ್ ಕಟ್ಟುವುದರಲ್ಲಿ ಮೊದಲ ಸ್ಥಾನದಲ್ಲಿದೆ: ಬಿ.ಆರ್.ನಾಗೇಂದ್ರಪ್ರಸಾದ್

ಕುಶಾಲನಗರ, ಮೇ 12:ಕೊಡಗು ಜಿಲ್ಲೆ ಕರ್ನಾಟಕದ ಪುಟ್ಟ ಜಿಲ್ಲೆ ಎನ್ನುವುದು ಗೊತ್ತಿರುವುದೇ. ಅಂತಹ ಪುಟ್ಟ ಜಿಲ್ಲೆ ಟ್ಯಾಕ್ಸ್ ಕಟ್ಟುವುದರಲ್ಲಿ ಮೊದಲ ಸ್ಥಾನದಲ್ಲಿ ಇದೆ ಎನ್ನುವುದು ಹೆಮ್ಮೆ ಪಡುವ ವಿಚಾರ ಎಂದು ಕೊಡಗು ಜಿಲ್ಲಾ ಚೇಂಬರ್ ಅಪ್ ಕಾಮರ್ಸ್ ನ ಉಪಾಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಶಾಲನಗರ ಚೇಂಬರ್ ಅಪ್ ಕಾಮರ್ಸ್ ವತಿಯಿಂದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬಾನುವಾರ ಆಯೋಜಿಸಿದ್ದ ವರ್ತಕರ ಸ್ನೇಹ ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಶಾಲನಗರದಲ್ಲಿ 1991 ಚೇಂಬರ್ ಅಪ್ ಕಾಮರ್ಸ್ ಪ್ರಾರಂಭವಾಯಿತ್ತು. ಆಗಿನ ಕಾಲದಲ್ಲಿ ಸರ್ಕಾರಿ ಅಧಿಕಾರಿಗಳು ವರ್ತಕರಿಗೆ ಅನಾವಶ್ಯಕ ಕಿರುಕುಳ ನೀಡಿ ಅಂಗಡಿಗಳಿಗೆ ದಾಳಿ ದಂಡ ಹಾಕುತ್ತಿದ್ದರು. ಅಂತಹ ಸಂದರ್ಭದಲ್ಲಿ ಚೇಂಬರ್ ಪದಾಧಿಕಾರಿಗಳು ವರ್ತಕರ ಪರವಾಗಿ ನಿಂತು ತೊಂದರೆಯಾಗುವುದನ್ನು ತಪ್ಪಿಸಿರುವ ಅನೇಕ ಉದಾಹರಣೆ ಇದೆ ಎಂದರು. ಕೊಡಗು ಕಾಫಿ ಜೊತೆಗೆ ಪ್ರವಾಸೋದ್ಯಮ ಅವಲಂಭಿತವಾಗಿದೆ. ಅದಕ್ಕೂ ಪೂರಕವಾದ ವಾತಾವರಣ ನಿರ್ಮಿಸಲು ಕರೆ ನೀಡಿದರು.

ಕೊಡಗು ಜಿಲ್ಲಾ ಚೇಂಬರ್ ಅಪ್ ಕಾಮರ್ಸ್ ನ ನಿರ್ದೇಶಕ ಎಸ್.ಕೆ.ಸತೀಶ್ ಮಾತನಾಡಿ, ವರ್ತಕರ ದಿನಾಚರಣೆಯನ್ನು ಆಚರಿಸುವಂತಾಗಬೇಕು. ಕುಶಾಲನಗರ ಸ್ಥಾನಿಯ ಸಮಿತಿ ವತಿಯಿಂದ ಉದ್ದೇಶಿಸಿರುವ ವರ್ತಕರ ಭವನಕ್ಕೆ ಸದಸ್ಯರು ಹೆಚ್ಚಿನ ಬೆಂಬಲ ನೀಡಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರವೀಂದ್ರ.ವಿ.ರೈ ಮಾತನಾಡಿ, ವರ್ತಕರ ಸಹಕಾರದಿಂದ ಸಂಘಟನೆ ಮತ್ತಷ್ಟು ಬಲಪಡಿಸಿತ್ತೇವೆ. ಭವನ ನಿರ್ಮಾಣಕ್ಕೆ ಬಹುತೇಕ ಎಲ್ಲ ತಯಾರಿಗಳು ಆಗಿದೆ. ಸದ್ಯದಲ್ಲೇ ಅದರ ನಿರ್ಮಾಣ ಮಾಡುವ ಸಲುವಾಗಿ ಸರ್ವರ ಸಹಕಾರ ಕೇಳಿಕೊಂಡರು.

ಕುಶಾಲನಗರ ಸ್ಥಾನಿಯ ಸಮಿತಿಯ ಸ್ಥಾಪಕ ಅಧ್ಯಕ್ಷ ಪಿ.ಪಿ.ಸತ್ಯನಾರಾಯಣ, ಮಾಜಿ ಅಧ್ಯಕ್ಷ ಬಿ.ಅಮೃತ್ ರಾಜ್, ಕಾರ್ಯದರ್ಶಿ ಕೆ.ಎಸ್.ನಾಗೇಶ್, ಕಾರ್ಯಕ್ರಮ ನಿರ್ದೇಶಕ ಕೆ.ಎನ್.ದೇವರಾಜ್, ಉಪಾಧ್ಯಕ್ಷ ಎಂ.ಡಿ.ರಂಗಸ್ವಾಮಿ, ನಿರ್ದೇಶಕರಾದ ಎನ್.ವಿ.ಬಾಬು, ಚಿತ್ರ, ರೂಪ, ಚಂದ್ರು, ಎಂ.ಕೆ.ದಿನೇಶ್ ಇತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!