ಪ್ರಕಟಣೆ

ದಿ.ಎಸ್.ಎನ್.ರಾಜಾರಾವ್ ಜಾತಿ ದೃಢೀಕರಣ ಪತ್ರ ಅಮಾನ್ಯ ಆದೇಶ: ಜಿಲ್ಲಾಧಿಕಾರಿ ಆದೇಶಕ್ಕೆ ತಡೆಯಾಜ್ಞೆ

ಕುಶಾಲನಗರ, ಮಾ 05: ಜಿಲ್ಲಾ ಜಾತಿ ಪರಿಶೀಲನೆ ಸಮಿತಿ ದಿವಂಗತ . ಎಸ್. ಎನ್. ರಾಜಾರಾವ್ ರವರು ಮರಣ ಹೊಂದಿದ ನಂತರ ವ್ಯಕ್ತಿಯ ಜಾತಿ ವಿಚಾರಣೆ ನಡೆಸಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ ಎಂಬ ಕಾನೂನಿನ ನಿಯಮಾನುಸಾರ ಜಾತಿ ವಿಚಾರಣೆಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ನೀಡಿದೆ.

ಜನವರಿ 10.ರಂದು ಎಸ್. ಎನ್. ರಾಜಾರಾವ್ ಅವರ ಜಾತಿ ದೃಢೀಕರಣ ಪತ್ರವನ್ನು ಅಮಾನ್ಯಗೊಳಿಸಿ ಎಂಬ ಆದೇಶ  ನೀಡಿರುತ್ತಾರೆ. ಆದರೆ ಯಾವುದೇ ಮರಣ ಹೊಂದಿದ ವ್ಯಕ್ತಿಯ ಜಾತಿ ವಿಚಾರಣೆ ನಡೆಸಲು ಅವಕಾಶವಿರುವುದಿಲ್ಲ. ಇದರ ವಿರುದ್ಧ ದಿ. ಎಸ್. ಎನ್. ರಾಜಾರಾವ್ ರವರ ವಾರಸುದಾರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ ನಂತರ ಉಚ್ಚ ನ್ಯಾಯಾಲಯವು ಜನವರಿ 10.ರಂದು ನೀಡಿದ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!