ಸಭೆ

ಕೂಡಿಗೆ ಗ್ರಾಪಂ ಸಭೆ: ಮಾಂಸದ ಅಂಗಡಿಗಳಿಗೆ ಲೈಸೆನ್ಸ್ ನೀಡಲು ತೀರ್ಮಾನ

ಕುಶಾಲನಗರ, ಅ 03: ಕೂಡಿಗೆ ಗ್ರಾಮ ಪಂಚಾಯತಿಯ ತುರ್ತು ಸಭೆ ಗ್ರಾ.ಪಂ ಅಧ್ಯಕ್ಷ ಕೆ.ಟಿ. ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪ್ರಮುಖವಾಗಿ ಕಳೆದ ಆರು ತಿಂಗಳಿಂದ ಗ್ರಾಪಂ ವ್ಯಾಪ್ತಿಯಲ್ಲಿರುವ ಮಾಂಸದ ಅಂಗಡಿಗಳ ಮಾಲೀಕರು ಲೈಸೆನ್ಸ್ ಪಡೆಯದೆ ವ್ಯಾಪಾರ ವಹಿವಾಟು ನಡೆಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಆದಾಯ ಕಡಿಮೆಯಾಗುತ್ತಿರುವ ಬಗ್ಗೆ ಚರ್ಚೆ ನಡೆದು  ಸಭೆಯಲ್ಲಿ ಹಾಜರಿದ್ದ ಸರ್ವ ಸದಸ್ಯರ ಅಭಿಪ್ರಾಯಗಳನ್ನು ಆಧರಿಸಿ ಕೋಳಿ, ಕುರಿ, ಹಂದಿ ಮಾಂಸ ಮಾರಾಟ ಮಳಿಗೆಯವರು ಮತ್ತು ಸಂಚಾರಿ ಮೀನು ಮಾರಾಟ ಮಾಡುವವರು ಸಭೆಯಲ್ಲಿ ತೀರ್ಮಾನ ಮಾಡಿದಷ್ಟು ಹಣವನ್ನು ಕಟ್ಟಿ ಲೈಸೆನ್ಸ್ ಪಡೆದು ವ್ಯಾಪಾರ ಮಾಡುವಂತೆ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಜಯಶ್ರೀ. ಸದಸ್ಯರಾದ ಅನಂತ್, ಅರುಣ್ ರಾವ್, ಹೆಚ್. ಎಸ್. ರವಿ ಮೋಹಿನಿ, ಮಂಗಳಾ, ಪಲ್ಲವಿ, ವಾಣಿ, ಜಯಶೀಲಾ, ಚಂದ್ರು, ಅಭಿವೃದ್ಧಿ ಅಧಿಕಾರಿ ಸಿ.ಎಸ್. ಮಂಜುಳ, ಗ್ರೇಡ್ 1 ಕಾರ್ಯದರ್ಶಿ ಅಂಜನಾದೇವಿ, ಕಾರ್ಯದರ್ಶಿ ಪುನೀತ್ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!