ಕ್ರೈಂ

ಜಾನುವಾರು ಅಪಹರಣ: ಮೂವರ ವಿರುದ್ದ ಪ್ರಕರಣ ದಾಖಲು

ಕುಶಾಲನಗರ, ಸೆ 15: ದಿನಾಂಕ: 05-09-2025 ರಂದು ಮೈತಾಡಿ ಗ್ರಾಮದ  ಬೊಳ್ಳಪಂಡ ಎಂ.ಭೀಮಯ್ಯ. ರವರ ಒಂದು ಹಸು ಕಳ್ಳತನವಾಗಿರುವ ಕುರಿತು ದೂರು ಸ್ವೀಕರಿಸಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸ್ : 303(1) 2 & 4, 5, 12 The Karnataka Prevention of Slaughter & Preservation of cattle Act-2020 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಸದರಿ ಪ್ರಕರಣದ ಆರೋಪಿಗಳ ಪತ್ತೆಗಾಗಿ  ಮಹೇಶ್ ಕುಮಾರ್.ಎಸ್, ಡಿಎಸ್ ಪಿ, ವಿರಾಜಪೇಟೆ ಉಪವಿಭಾಗ,  ಅನೂಪ್ ಮಾದಪ್ಪಪಿ, ಸಿಪಿಐ, ವಿರಾಜಪೇಟೆ ವೃತ್ತ,  ಲತಾ.ಎನ್.ಜೆ. ಪಿಎಸ್‌ಐ, &  ವಾಣಿಶ್ರೀ, ಪಿಎಸ್‌ಐ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ  ಸಾಜನ್,  ಡೋಸ್ ನಿಶಾಂತ್,  ಸಂತೋಷ್ ಚೌಪನ್,  ಅಬ್ದುಲ್ ಮಜೀದ್,  ಬೋಪಣ್ಣ ರವರುಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿ: 13-09-2025 ರಂದು ಈ ಕೆಳಕಂಡ 03 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

ಆರೋಪಿಗಳ ವಿವರ:

1. ಮೊಹಮ್ಮದ್ ಆಶಿಕ್, (22 ವರ್ಷ, ಕೊಂಡಂಗೇರಿ ಗ್ರಾಮ, ವಿರಾಜಪೇಟೆ ತಾ।

2. ಶಾಹಿದ್, (25 ವರ್ಷ), ಕೊಂಡಂಗೇರಿ ಗ್ರಾಮ, ವಿರಾಜಪೇಟೆ ತಾ.

3. ಹ್ಯಾರೀಸ್, (34 ವರ್ಷ), ಕೊಂಡಂಗೇರಿ ಗ್ರಾಮ, ವಿರಾಜಪೇಟೆ ತಾ।

ವತಪಡಿಸಿಕೊಂಡ ಸತ್ತುಗಳ ವಿವರ:

ನಗದು. 2,600/-

ಸದರಿ ಪ್ರಕರಣದ ಆರೋಪಿ ಹ್ಯಾರೀಸ್ ಎಂಬಾತನು 2024 ನೇ ಸಾಲಿನಲ್ಲಿ ಸಿದ್ದಾಪಾರ ಪೊಲೀಸ್ : 379, 34 2 & 12 The Karnataka Prevention of Slaughter & Preservation of Cattle Act-2020 20 ಅಡಿಯಲ್ಲಿ ಪ್ರಕರಣ ದಾಖಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!