ಸಾಂಸ್ಕೃತಿಕ

ಹಾರಂಗಿಯ ಅತ್ತೂರಿನಲ್ಲಿ ಶತ ಕಂಠದಲ್ಲಿ ಗೀತ ಗಾಯನ ಕಾರ್ಯಕ್ರಮ

ಕುಶಾಲನಗರ, ಡಿ 28:ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ವಂದೇ ಮಾತರಂ ಹಾಗೂ ಉದಯವಾಗಲಿ ಚೆಲುವ ಕನ್ನಡ ನಾಡು ಗೀತೆಗೆ ಶತಮಾನ ಸಂಭ್ರಮ ಹಿನ್ನೆಲೆಯಲ್ಲಿ

ಹಾರಂಗಿಯ ಅತ್ತೂರಿನಲ್ಲಿ ಶತಕಂಠದಲ್ಲಿ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಸಾಹಿತಿ ಕಣಿವೆ ಭಾರಧ್ವಾಜ್ ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡ ಸಿರಿ ಸ್ನೇಹ‌ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೊಡಗು‌ ಜಿಲ್ಲಾ ಕನ್ನಡ ಸಿರಿ ಸ್ನೇಹ ಬಳಗ, ಕುಶಾಲನಗರ ತಾಲೂಕು ಜಾನಪದ‌ ಪರಿಷತ್, ಕುಶಾಲನಗರ ರೋಟರಿ ಸಂಸ್ಥೆ, ಜೆಸಿಐ ಕುಶಾಲನಗರ ಕಾವೇರಿ, ಲಯನ್ಸ್ ಸಂಸ್ಥೆ, ಕರ್ನಾಟಕ ವಿಕಾಸ ರಂಗ, ಶ್ರೀ ವೆಂಕಟಾದ್ರಿ ಭಜನಾ ಮಂಡಳಿ, ಆರ್ಯವೈಶ್ಯ ಮಹಿಳಾ ಮಂಡಳಿ, ಸಮಸ್ತ ಭಜನಾ ಮಂಡಳಿ, ಕುಶಾಲನಗರ ಗೆಳೆಯರ ಬಳಗ, ಕಾವೇರಿ ಆರತಿ ಬಳಗದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕು ತಹಸೀಲ್ದಾರ್ ಕೃಷ್ಣಮೂರ್ತಿ, ನಿವೃತ್ತ ಸೈನಿಕ ಹೆಚ್.ಆರ್, ಸುರೇಶ್ ರಾಜಪ್ಪ,
ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ, ಜೆಸಿಐ ಪೂರ್ವ ಅಧ್ಯಕ್ಷ ಅಮೃತ್ ರಾಜ್, ಲಯನ್ಸ್ ಅಧ್ಯಕ್ಷ ನಾರಾಯಣ್, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವೈಲೇಶ್, ನಿವೃತ್ತ ಉಪನ್ಯಾಸಕ  ಸಬಲಂ ಭೋಜಣ್ಣ ರೆಡ್ಡಿ, ಜವರಪ್ಪ, ಭಜನಾ ಮಂಡಳಿಯ ಪದ್ಮಾ ಪುರುಷೋತ್ತಮ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!