ಕುಶಾಲನಗರ, ನ 25: ಕುಶಾಲನಗರದ
ವಾತ್ಸಲ್ಯ ಶಿಶು ಪಾಲನ ಕೇಂದ್ರದ ಮಕ್ಕಳ ಸಮವಸ್ತ್ರ ವಿತರಣೆ ಸಮಾರಂಭ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ. ಶಾಂತಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಸೋಮವಾರಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕರಿ ವಿಶ್ವಜ್ಞ, ಮಡಿಕೇರಿಯ ತಂಬಾಕು ಕೋಶ ಅಧಿಕಾರಿ ಮಂಜುನಾಥ್, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಕುಶಾಲನಗರ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಎಂ.ಡಿ ರಂಗಸ್ವಾಮಿ, ಸ್ತ್ರೀ ಶಕ್ತಿ ಒಕ್ಕೂಟದ ರಾಜ್ಯಾಧ್ಯಕ್ಷೆ ಹಾಗೂ ಜಿಲ್ಲಾಧ್ಯಕ್ಷೆ ರೆಹನಾ ಸುಲ್ತಾನ್ ಹಾಗೂ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಹೇಮಾ ಅವರು ಮಕ್ಕಳ ಸಮವಸ್ತ್ರ ಬಿಡುಗಡೆಗೊಳಿಸಿ ವಿತರಣೆ ಮಾಡಿದರು.
ಕೇಂದ್ರದ ಸಿಬ್ಬಂದಿಗಳು, ಮಕ್ಕಳ ಪೋಷಕರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕೊನೆಯಲ್ಲಿ ಮಕ್ಕಳಿಗೆ ಕೇಕ್ ಮತ್ತು ಹಾಲನ್ನು ವಿತರಿಸಲಾಯಿತು.
Back to top button
error: Content is protected !!