ಕುಶಾಲನಗರ, ನ 13: ಹಾರಂಗಿ ಬ್ಯಾಕ್ ವಾಟರ್ ನಲ್ಲಿ
ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ನ ಬೋಟ್ ಪಲ್ಟಿಯಾಗಿ ಇಬ್ಬರು ಪ್ರವಾಸಿ ದಂಪತಿಗಳು ಮೃತಪಟ್ಟ ಘಟನೆ ನಡೆದಿದೆ.
ಹಾರಂಗಿ ಅಣೆಕಟ್ಟೆ ಸಮೀಪದ ಆನೆಕ್ಯಾಂಪ್ ಬಳಿಯ ನಡೆಯುತ್ತಿರುವ ವಾಟರ್ ಸ್ಪೋರ್ಟ್ ಬೋಟಿಂಗ್ ನಲ್ಲಿ
ಗುಜರಾತ್ ನ ಸೂರತ್ ಮೂಲದ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಬೋಟಿಂಗ್ ತೆರಳಿದ್ದಾರೆ. ನೀರಿನಲ್ಲಿ ತಿರುವು ತೆಗೆದುಕೊಳ್ಳುವ ಸಂದರ್ಭ ಬೋಟ್ ಪಲ್ಟಿಯಾಗಿದೆ. ನಾಲ್ವರೂ ಕೂಡ
ಲೈಫ್ ಜಾಕೆಟ್ ಧರಿಸಿದ್ದರು. ನೀರಿನಲ್ಲಿ ತೇಲುತ್ತಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದ್ದು ದುರಂತದಲ್ಲಿ ಬೋಟ್ ಅಡಿಯಲ್ಲಿ ಸಿಲುಕಿ ಪತಿ ಧರ್ಮೇಶ್ (50), ಪತ್ನಿ ನಿಮ್ಮಿ (48) ದುರ್ಮರಣ ಹೊಂದಿದ್ದಾರೆ. ಮಕ್ಕಳಾದ ದಿವಾನ್ಸಿ (24), ಅನುಜ್ (21) ಅವರನ್ನು ರಕ್ಷಿಸಲಾಗಿದೆ.
ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Back to top button
error: Content is protected !!