ಆರೋಪ

ಕುಶಾಲನಗರ ಪುರಸಭೆಯಿಂದ ಕಂಬಳ ಕೋಣಗಳ ಸ್ವಾಗತಕ್ಕೆ 10 ಲಕ್ಷ ಖರ್ಚು: ಬಂದಿದ್ದು 25 ಜೋಡಿ ಕೋಣ, 1000 ಜನ ಮಾತ್ರ

ಕುಶಾಲನಗರ, ಅ.17: ಮಂಗಳೂರಿನಿಂದ ಮೈಸೂರು ದಸರಾಕ್ಕೆ ತೆರಳುವ ಕಂಬಳ ಕೋಣಗಳನ್ನು ಕುಶಾಲನಗರದಲ್ಲಿ ಸ್ವಾಗತಿಸುವ ಕಾರ್ಯಕ್ರಮವನ್ನು ಇಂದು *ಕುಶಾಲನಗರ ಪುರಸಭೆ* ವತಿಯಿಂದ ಆಯೋಜಿಸಿ, ಖರ್ಚು ಮಾಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ *ಬಿಲ್ಲವ ಸಂಘ ಮತ್ತು ಬಂಟರ ಸಂಘದ* ಸದಸ್ಯರ ಪಾಲ್ಗೊಳ್ಳುವಿಕೆ ಮತ್ತು ಅವರ ಶ್ರಮ ಶ್ಲಾಘನೀಯವಾಗಿತ್ತು. ಕೋಣಗಳನ್ನು ಸ್ವಾಗತಿಸಲು, ವ್ಯವಸ್ಥೆ ಮಾಡಲು ಅವರು ತೋರಿದ ಆಸಕ್ತಿ ಮತ್ತು ಓಡಾಟ ನಿಜಕ್ಕೂ ಮೆಚ್ಚುವಂತದ್ದು.

*ಆದರೆ ಪುರಸಭೆಯ ಖರ್ಚಿನ ಬಗ್ಗೆ ಅಪಸ್ವರ:*
ಪುರಸಭೆ 120 ಜೋಡಿ ಕೋಣಗಳು ಬರುತ್ತವೆ, 3000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿ ಸುಮಾರು *10 ಲಕ್ಷ ರೂಪಾಯಿ* ಖರ್ಚಿನ ಲೆಕ್ಕ ತೋರಿಸಿದೆ.

ಆದರೆ ವಾಸ್ತವದಲ್ಲಿ:
– ಬಂದ ಕೋಣಗಳು: *ಕೇವಲ 25 ರಿಂದ 30 ಜೋಡಿ ಮಾತ್ರ*
– ಬಂದ ಜನರು: *ಕೇವಲ 1000 ಜನ ಮಾತ್ರ*

120 ಜೋಡಿಗೆ ಮತ್ತು 3000 ಜನರಿಗೆ ಅಂತ ಹೇಳಿ 10 ಲಕ್ಷ ರೂಪಾಯಿ ಸಾರ್ವಜನಿಕರ ಹಣ ಖರ್ಚು ಮಾಡಲಾಗಿದೆ. ಬಂದಿದ್ದು ಕಾಲು ಭಾಗ ಮಾತ್ರ. ಹಾಗಾದರೆ ಉಳಿದ ಹಣ ಎಲ್ಲಿ ಹೋಯ್ತು? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಕಂಬಳದ ಹೆಸರಿನಲ್ಲಿ ಪುರಸಭೆ ಸುಖಾಸುಮ್ಮನೆ ಖರ್ಚು ತೋರಿಸಿ ಹೆಚ್ಚಿನ ಹಣದ ಬಿಲ್ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪುರಸಭೆಯ ಈ ಖರ್ಚು ವೆಚ್ಚದ ಸಂಪೂರ್ಣ ಲೆಕ್ಕವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಮತ್ತು ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಎಂ.ಡಿ.ಕೃಷ್ಣಪ್ಪ ಉಪಾಧ್ಯಕ್ಷರು ಭಾರತೀಯ ಜನತಾ ಪಾರ್ಟಿ.ಸೋಮವಾರಪೇಟೆ ಮಂಡಲ

Related Articles

Leave a Reply

Your email address will not be published. Required fields are marked *

Back to top button
error: Content is protected !!