ಕಾಮಗಾರಿ

ಕುಶಾಲನಗರದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಸುಮಾರು 30 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕ್ಲಾಕ್ ಟವರ್ ನಿರ್ಮಾಣಕ್ಕೆ ಭೂಮಿಪೂಜೆ

ಕುಶಾಲನಗರ, ಅ 15: ನಗರದ ಹೃದಯ ಭಾಗದಲ್ಲಿ ಕುಶಾಲನಗರ ತಾಲೂಕಿಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಒಂದೆಡೆ ಸೇರುವ ಸನಿಹದಲ್ಲಿ ನಗರದ ಸೌಂದರ್ಯವನ್ನು ಹೆಚ್ಚಿಸುವ ರೀತಿಯಲ್ಲಿ ಒಂದು ಮಾನ್ಯುಮೆಂಟ್ ನಿರ್ಮಾಣವಾಗುತ್ತಿರುವುದು ಸಂತಸದ ವಿಚಾರ ಎಂದು ಮಡಿಕೇರಿ ಕ್ಷೇತ್ರ ಶಾಸಕರಾದ ಡಾ. ಮಂತರ್ ಗೌಡ ಹೇಳಿದರು.
ಕುಶಾಲನಗರದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಸುಮಾರು 30 ಲಕ್ಷ ರೂಪಾಯಿಗಳ ವೆಚ್ಚದ, ನಂ.19720 ನಗರದ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘ ನಿ.. ಸಂಘದ ರಜತ ಮಹೋತ್ಸವ ಸವಿನೆನಪಿಗಾಗಿ ನಿರ್ಮಿಸಲಿರುವ “ಕನ್ನಿಕ ಕ್ಲಾಕ್ ಟವರ್”- ನಿರ್ಮಿಸಲು ಭೂಮಿ ಪೂಜಾ ಕಾರ್ಯಕ್ರಮಕ್ಕೆ ಶಿಲಾನ್ಯಾಸ ಮಾಡಿ ಮಾತನಾಡಿದ ಅವರು, ಸರ್ಕಾರಗಳು ಮಾಡಬೇಕಾದ ಇಂತ ಜನೋಪಕಾರಿ ಕಾರ್ಯಗಳನ್ನು ವಾಸವಿ ಸಂಘದವರು ಮಾಡುತ್ತಿರುವುದು ಪ್ರಶಂಸನಿಯ ಕೆಲಸ. ಇದು ಮುಂದೊಮ್ಮೆ ಕನ್ನಿಕಾ ಟವರ್ ಎಂದು ಕರೆಯಲ್ಪಡುವಾಗ ಕನ್ನಿಕಾ ಮಾತೆಯನ್ನು ಬಹಳಷ್ಟು ಕಾಲದವರೆಗೆ ಸ್ಮರಿಸುವಂತ ಪುಣ್ಯದ ಕೆಲಸವನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ಆರ್ಥಿಕ ಸಹಕಾರ ಒದಗಿಸುತ್ತಿರುವ ಎಲ್ಲರಿಗೂ ಶುಭವಾಗಲಿ. ಅನಿವಾರ್ಯವನಿಸಿದರೆ ಶಾಸಕರ ನಿಧಿಯಿಂದಲೂ ಇಂತಹ ಮಹತ್ವದ ಕೆಲಸಕ್ಕೆ ಆರ್ಥಿಕ ಸಹಾಯವನ್ನು ಮಾಡುವುದಾಗಿ ಹೇಳಿದರು.
ಕನ್ನಿಕ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಿ ಅಮೃತ್ ರಾಜ್ ಮಾತನಾಡಿ, ಸದ್ಯದಲ್ಲೇ ರಚಿತ ಮಹೋತ್ಸವ ಸಂಭ್ರಮ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ಸುಂದರವಾದ ಕ್ಲಾಕ್ ಟವರ್ ನಿರ್ಮಾಣ ಮಾಡಬೇಕೆಂಬ ಆಲೋಚನೆಯನ್ನು ಸಮಾಜದ ಎಲ್ಲರೂ ಮಾಡಿದ ಹಿನ್ನೆಲೆಯಲ್ಲಿ ಈ ದಿನ ಶಿಲನ್ಯಾಸ ಕಾರ್ಯಕ್ರಮ ನಡೆಯಿತು. ನಮ್ಮ ಸಂಘದ ಸಮಾಜಸೇವಾ ಕಾರ್ಯಗಳಲ್ಲಿ ಒಂದಾದ ಮೂರು ಲಕ್ಷ ವೆಚ್ಚದಲ್ಲಿ ಆಸ್ಪತ್ರೆಯ ಪಕ್ಕ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಅದರಂತೆ ಆಸ್ಪತ್ರೆಯ ಪಕ್ಕದಲ್ಲಿ ಮೂರು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಲಾಗಿದೆ. ಕುಶಾಲನಗರದ ಬಹುತೇಕ ವಿದ್ಯಾ ಸಂಸ್ಥೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಪೂರಕವಾಗಿ ಮಾಡಿಕೊಡಲಾಗಿದೆ ಎಂದರು.
ಈ ಸಂದರ್ಭ ನಡೆದ ಕಾರ್ಯಕ್ರಮದಲ್ಲಿ
ಉಪಾಧ್ಯಕ್ಷರಾದ ಪಿ.ಆರ್.ಮಂಜುನಾಥ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಕುಂತಲಾ,ಸಲಹ ಸಮಿತಿ ಸದಸ್ಯರಾದ ಬಿ.ಆರ್. ನಾಗೇಂದ್ರ ಪ್ರಸಾದ್, ಬಾಲಾಜಿ,ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಬಿಜೆಪಿಯ ನಗರಾಧ್ಯಕ್ಷ ಎಂ.ಎಂ.ಚರಣ್,
ಕಾಂಗ್ರೆಸ್ ನಾಯಕ, ಕೆಪಿಸಿಸಿ ಸದಸ್ಯ
ಮಂಜುನಾಥ್ ಗುಂಡೂರಾವ್,
ಪ್ರಾಜೆಕ್ಟ್ ಡೈರೆಕ್ಟರ್ ಆದ ಅಶ್ವಿನ್,
ಸಂಸ್ಥಾಪಕ ಅಧ್ಯಕ್ಷರಾದ ರವಿಕುಮಾರ್,
ಕಾನೂನು ಸಲಹೆಗಾರರ ಆರ್. ಕೆ. ನಾಗೇಂದ್ರ ಬಾಬು, ನಿರ್ದೇಶಕರುಗಳಾದ ಅಂಜನ್,ಆದರ್ಶ್, ಚಿತ್ರ ರಮೇಶ್, ಲತಾ, ರಮೇಶ್, ದೀಪ್ತಿ, ಚೇತನ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!