ಕುಶಾಲನಗರ, ಆ 31:ಗೋಣಿಕೊಪ್ಪ ಪೊಲೀಸ್ ವ್ಯಾಪ್ತಿಯ ಗೋಣಿಕೊಪ್ಪ ಮಾರ್ಕೆಟ್ನಲ್ಲಿರುವ ಸಾರ್ವಜನಿಕ ಶೌಚಾಲಯದ ಬಳಿ ಇದ್ದ ಅಪ್ರಾಪ್ತ ಬಾಲಕಿಯ ಮೇಲೆ ಅಪರಿಚಿತ ವ್ಯಕ್ತಿ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ದಿನಾಂಕ: 28/08/2026 ರಂದು ದೂರು ಸ್ವೀಕರಿಸಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊ.ಸಂ: 111/2026, ಕಲಂ: 64(2)(ಪ), 65(1) ಬಿಎನ್ಎಸ್ ಮತ್ತು ಕಲಂ 4(1), 6(1) ಪೋಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿ ಕಾಕೇರ ಡಿ. ಭರತ್, 57 ವರ್ಷ, ಕುಂಜಿಲ ಗ್ರಾಮ, ವಿರಾಜಪೇಟೆ ತಾಃ ಈತನನ್ನು ದಿನಾಂಕ: 30/08/2026 ರಂದು ವಿರಾಜಪೇಟೆಯಲ್ಲಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿರುತ್ತದೆ.
Back to top button
error: Content is protected !!