ಪ್ರಕಟಣೆ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಂಚಾಲಕ

ಕುಶಾಲನಗರ ಅ 22 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಸಂಚಾಲಕರಾಗಿ ಪಿ.ಡಿ.ರವಿಕುಮಾರ್ ಅವರನ್ನು ನಿಯೋಜಿಸಲಾಗಿದೆ.

ಸಿದ್ದಲಿಂಗಪುರದ ಸರಕಾರಿ ಶಾಲಾ ಮೈದಾನದಲ್ಲಿ ನಡೆದ‌ ಸಂಘದ ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಅವರು ನೇಮಕಗೊಳಿಸಿ ಆದೇಶ ಹೊರಡಿಸಿದರು.
ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ರೈತ ಸಂಘ ಸೇರುವ ಮುಖೇನ ರೈತರ ಸಮಸ್ಯೆಯಾದ ಕೃಷಿ ಭೂಮಿಯನ್ನು ಸರಕಾರ ಮತ್ತು ಅರಣ್ಯ ಎಂದು ಆರ್.ಟಿ.ಸಿ ಯಲ್ಲಿ ಅಧಿಕಾರಿಗಳು ನಮೂದಿಸಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿ ಸರಕಾರ ಪೋಡಿ ಮಾಡಲು ಆದೇಶ ಮಾಡಿದ್ದರು ಸಹ ಸರಿಯಾದ ರೀತಿಯಲ್ಲಿ ಪೋಡಿ ಮಾಡದೆ ರೈತರನ್ನು ಅಲೆದಾಡಿಸುತ್ತಿರುವುದು ವಿಷಾದನೀಯ. ಆದರಿಂದ ಮುಂದಿನ ದಿನಗಳಲ್ಲಿ ರೈತರ ಭೂಮಿಯ ದಾಖಲೆಗಳನ್ನು ಸರಿಪಡಿಸಿ ಕೊಡದೆ ಇದ್ದಲ್ಲಿ ಸಂಬಂಧ ಪಟ್ಟ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವುದರ ಮೂಲಕ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಮಾಡುವ ಮೂಲಕ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು‌ ನೂತನ ಸಂಚಾಲಕ ರವಿಕುಮಾರ್ ತಿಳಿಸಿದ್ದಾರೆ.
ಹಾಗೂ ಮುಂದಿನ ದಿನಗಳಲ್ಲಿ ರೈತರ ಮನೆ ಮನೆಗೆ ಹೋಗಿ ಸಂಪರ್ಕಿಸಿ ಸಂಘಟನೆ ಮಾಡುವ ಮುಖಾಂತರ ಸಂಘಕ್ಕೆ ಸೇರಿಕೊಳ್ಳುವಂತೆ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!