ಆರೋಪ

ಗುಡ್ಡೆಹೊಸೂರು-ನಂಜರಾಯಪಟ್ಟಣ ಮಾರ್ಗದಲ್ಲಿವೆ ಅಪಾಯಕಾರಿ ರಸ್ತೆ ಹೊಂಡಗಳು

ಕುಶಾಲನಗರ, ನ 03: ಗುಡ್ಡೆಹೊಸೂರು-ನಂಜರಾಯಪಟ್ಟಣ ಮಾರ್ಗದಲ್ಲಿರುವ ಅಪಾಯಕಾರಿ ರಸ್ತೆ ಗುಂಡಿಗಳನ್ನು ಮುಚ್ಚಲು ಕೂಡಲೆ ಕ್ರಮವಹಿಸಬೇಕಿದೆ ಎಂದು ನಂಜರಾಯಪಟ್ಟಣ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಎಲ್.ವಿಶ್ವ ಆಗ್ರಹಿಸಿದ್ದಾರೆ.

ಈ‌ ಮಾರ್ಗದಲ್ಲಿ ಅಲ್ಲಲ್ಲಿ ಬೃಹತ್ ಹೊಂಡಗಳು ನಿರ್ಮಾಣಗೊಂಡಿದ್ದು ಇದೇ ಕಾರಣದಿಂದ ಕಳೆದೆರೆಡು ದಿನಗಳ ಹಿಂದೆ ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಶೀಘ್ರವಾಗಿ ಕೈಗೊಳ್ಳಬೇಕಿದೆ. ತಪ್ಪಿದಲ್ಲಿ ಗ್ರಾಮಸ್ಥರು‌ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ವಿಶ್ಚ ಅವರು ಎಚ್ಚರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!