ಸಿದ್ದಾಪುರ, ಅ 21: ನಿಯಂತ್ರಣ ತಪ್ಪಿದ ಕಾರು ಕೆರೆ ಬಿದ್ದು ಕಾರಿನಲ್ಲಿದ್ದ ಪುಟ್ಟ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ ಘಟನೆ ಬಾಡಗ ಬಾಣಂಗಾಲ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಸಿದ್ದಾಪುರ ಹೈಸ್ಕೂಲ್ ಪೈಸಾರಿ ನಿವಾಸಿ, ಬಾಣಂಗಾಲ ಗ್ರಾಮದ ಎಲ್ಕ್ ಹಿಲ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ವಿಜೇಶ್(36), ಪತ್ನಿ ಪಮಿತ (34), ಹಾಗೂ ಮಗಳು ಲಿಯ (4) ಮೃತ ದುರ್ದೈವಿಗಳು. ಸಿದ್ದಾಪುರದಿಂದ ಬಾಣಂಗಾಲ ಗ್ರಾಮದ ಮನೆಗೆ ಮಂಗಳವಾರ ರಾತ್ರಿ ತೆರಳುತ್ತಿದ್ದ ಸಂದರ್ಭ ಕಾರು ಬಾಣಂಗಾಲ ಕೆರೆಗೆ ಉರುಳಿದೆ. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದದಾರೆ. ಬುಧವಾರ ಬೆಳಗ್ಗೆ ತೋಟದ ಕಾರ್ಮಿಕರು ಕೆರೆಯಲ್ಲಿದ್ದ ಕಾರನ್ನು ಕಂಡಿದ್ದು, ಬಳಿಕ ಮೂವರ ಮೃತದೇಹವನ್ನು ಕೆರೆಯಿಂದ ಹೊರತೆಗೆಯಲಾಗಿದೆ.
Back to top button
error: Content is protected !!